ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ 24 ಗಂಟೆಯೂ ಹೋಟೆಲ್ ಸೇವೆ!

ಸರ್ಕಾರಕ್ಕೆ ನಗರ ಪೊಲೀಸರ ವರದಿ; ಹೋಟೆಲ್‌ ಸಂಘದಿಂದ ವಿರೋಧ
Last Updated 29 ಜೂನ್ 2022, 21:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಯ್ದ ಸ್ಥಳಗಳಲ್ಲಿ 24 ಗಂಟೆಯೂ ಹೋಟೆಲ್ ತೆರೆಯಲು ‌ನಗರ ಪೊಲೀಸರು ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ‌.

‘ನಗರದ ಪ್ರಮುಖ ಬಸ್ ಹಾಗೂ ರೈಲು ನಿಲ್ದಾಣ ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ನೀಡಬಹುದಾಗಿದೆ‌. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ನಗರದ ಎಲ್ಲೆಡೆ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲು ಕಷ್ಟವಾಗಲಿದೆ. ಜನಸಂದಣಿಯಿಲ್ಲದ ಪ್ರದೇಶಗಳಲ್ಲಿ ಹೋಟೆಲ್ ವಹಿವಾಟಿಗೆ ಅವಕಾಶ ಕೊಟ್ಟರೆ, ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ. ಸಿಬ್ಬಂದಿ ಇಲ್ಲದಿರುವುದು ಎಲ್ಲೆಡೆ ಅನುಮತಿ ನಿರಾಕರಿಸಲು ಮತ್ತೊಂದು ಕಾರಣ. ಹೀಗಾಗಿ ನಿರ್ದಿಷ್ಟ ಸ್ಥಳಗಳಲ್ಲಿ‌ ಮಾತ್ರ ಹೋಟೆಲ್ ನಡೆಸಲು ಅನುಮತಿ ನೀಡಬಹುದಾಗಿದೆ’ ಎಂದು ಸರ್ಕಾರಕ್ಕೆ ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.

‘ಮೆಜೆಸ್ಟಿಕ್‌, ರೈಲು ನಿಲ್ದಾಣ ಹಾಗೂ ಕೆಲವು ಕಡೆಗಳಲ್ಲಿ ಈಗಾಗಲೇ 24 ಗಂಟೆಯೂ ಹೋಟೆಲ್‌ಗಳು ತೆರೆದಿರುತ್ತವೆ. ಅವುಗಳಿಗೆ ಅನುಮತಿ ಇದೆ. ಇದನ್ನು ಹೊರತುಪಡಿಸಿದಂತೆ ಜನರಿಗೆ ಅಗತ್ಯವಿರುವ ಪ್ರದೇಶಗಳಲ್ಲಿ ಎಲ್ಲ ಸಮಯದಲ್ಲೂ ಹೋಟೆಲ್‌ ತೆರೆಯಲು ನಾವು ಮನವಿ ಮಾಡಿಕೊಂಡಿದ್ದೆವು. ಅದಕ್ಕೆ ಮುಖ್ಯಮಂತ್ರಿಯವರೂ ಒಪ್ಪಿದ್ದರು. ಆದರೆ ಈಗ ಪೊಲೀಸರು ಅನುಮತಿ ನೀಡದಿದ್ದರೆ ನಾವು ಮತ್ತೊಮ್ಮೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ ಎಂದರು.

‘ನೆರೆಯ ತಮಿಳುನಾಡು, ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ 24 ಗಂಟೆ ಹೋಟೆಲ್ ತೆರೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಅನುಮತಿ ನೀಡಬೇಕು‌. ಇದರಿಂದ ಅಗತ್ಯ ಇರುವವರಿಗೆ ಅನುಕೂಲವಾಗುತ್ತದೆ. ಅಲ್ಲದೆ ಉದ್ಯೋಗ ಅವಕಾಶಗಳೂ ಹೆಚ್ಚಾಗಲಿವೆ’ ಎಂದರು.

ಎಲ್ಲೆಡೆ ಊಟ ಸಿಗಲಿ

‘ರಾತ್ರಿಯೆಲ್ಲ ಆಟೊ ಓಡಿಸುತ್ತೇವೆ. ಒಂದೊಂದು ಬಾರಿ ಹಸಿವಾಗುತ್ತದೆ. ಆಗ ಊಟ ಸಿಗುವುದಿಲ್ಲ. ಕೆಲವೇ ಸ್ಥಳಗಳಿಗೆ ಹುಡುಕಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಎಲ್ಲ ಸಮಯದಲ್ಲೂ ಎಲ್ಲೆಡೆ ಊಟ ಅಥವಾ ತಿಂಡಿ ಸಿಕ್ಕರೆ ಒಳ್ಳೆಯದು’ ಎಂದು ಆಟೊ ಚಾಲಕ ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಹೋಟೆಲ್‌ ಮಾಲೀಕರ ವಿರೋಧ

‘ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಪೊಲೀಸರು ಅನುಮತಿ ನೀಡಿದ್ದರೆ ಅದಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧವಿದೆ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT