ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಸಂಚರಿಸುವಾಗ ಮೊಬೈಲ್ನಲ್ಲಿ ಸಂಗೀತ ಹಾಕುವುದು, ಹಿರಿಯರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ ಮೀಸಲಾದ ಸೀಟುಗಳನ್ನು ಅವರಿಗೆ ಬಿಟ್ಟುಕೊಡದಿರುವುದು ಸೇರಿದಂತೆ ಸಹ ಪ್ರಯಾಣಿಕರಿಗೆ ಅನನುಕೂಲ ಮಾಡಿರುವ 27 ಸಾವಿರ ಪ್ರಕರಣಗಳು ಕಳೆದ ಆರು ತಿಂಗಳಲ್ಲಿ ನಡೆದಿವೆ.

‘ನಮ್ಮ ಮೆಟ್ರೊ’ ವಿಚಕ್ಷಣಾ ದಳ ನಡೆಸಿದ ಭದ್ರತಾ ಪರೀಕ್ಷೆಗಳಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ. ಅಂಥ ಪ್ರಯಾಣಿಕರಿಗೆ ಯಾವುದೇ ದಂಡ ವಿಧಿಸದೇ ಎಚ್ಚರಿಕೆ ನೀಡಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ಗಳಲ್ಲಿ ದೊಡ್ಡ ಧ್ವನಿಯಲ್ಲಿ ಸಂಗೀತ ಹಾಕಿದ 11,922 ಪ್ರಕರಣಗಳು ಕಂಡುಬಂದಿವೆ. ಅಂಗವಿಕಲರಿಗೆ, ಹಿರಿಯರಿಗೆ, ಗರ್ಭಿಣಿಯರಿಗೆ, ಸಣ್ಣ ಮಗು ಎತ್ತಿಕೊಂಡಿರುವವರಿಗೆ ಮೀಸಲಾದ ಆಸನಗಳನ್ನು ಬಿಟ್ಟುಕೊಡದ 14,162 ಪ್ರಕರಣಗಳು ಕಂಡುಬಂದಿವೆ. ಮೆಟ್ರೊ ಪ್ರಯಾಣದ ವೇಳೆ ಆಹಾರ ಸೇವಿಸಲು ಅವಕಾಶವಿಲ್ಲ. ಈ ನಿಯಮ ಉಲ್ಲಂಘಿಸಿ ಆಹಾರ ಸೇವಿಸಿದ 554 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡ ಗಾತ್ರದ ಲಗೇಜು ಒಯ್ದ 474 ಪ್ರಕರಣಗಳು ಪತ್ತೆಯಾಗಿವೆ.

ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಲಾಗಿದೆ. ಮುಂದೆ ಈ ರೀತಿ ಮಾಡಿದರೆ ದಂಡ ವಿಧಿಸಲಾಗುವುದು. ಮೆಟ್ರೊ ನಿಯಮಗಳನ್ನು ಪ್ರಯಾಣಿಕರು ಪಾಲಿಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.