ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗಾಳಿಯ ನಿರೀಕ್ಷೆಯಲ್ಲಿ...

Last Updated 6 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಕೇಂದ್ರದ ನಿರ್ಧಾರಕ್ಕೆ ಯುವ ಮನಸುಗಳು ಏನು ಹೇಳುತ್ತವೆ? ಈ ಕುರಿತ ‘ಮೆಟ್ರೊ’ ಪ್ರಯತ್ನವಿದು.

* ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ವಿಧಿಯನ್ನು ತೆಗೆದು ಹಾಕುವ ಮೂಲಕ ಸಮಾನತೆ ಸಾಧ್ಯವಾಗಲಿದೆ

–ಅಂಕಿತ್‌

* ವಿಧಿಯನ್ನು ರದ್ದು ಮಾಡುವುದಕ್ಕಿಂತ ಮೊದಲು ಕಾಶ್ಮೀರಿಗಳ ಜತೆ ಮಾತುಕತೆ ನಡೆಸಬೇಕಿತ್ತು. ಕೆಲವರು ಪಾಕಿಸ್ತಾನಕ್ಕೆ ಹೋಗಲು ಬಯಸಿದರೆ, ಇನ್ನೂ ಕೆಲವುರು ಭಾರತದಲ್ಲಿ ಉಳಿಯಬಹುದು. ದಿಢೀರ್‌ ನಿರ್ಧಾರ ತೆಗೆದುಕೊಳ್ಳಬಾರದಿತ್ತು.

–ಕಾವ್ಯಾ

* ಈ ವಿಧಿಯನ್ನು ರದ್ದು ಮಾಡಿದ ನಂತರ ಕಣಿವೆ ರಾಜ್ಯದ ಬುಡಕಟ್ಟು ಜನಾಂಗಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಅವರನ್ನು ಪ್ರೋತ್ಸಾಹಿಸಲೆಂದೇ ಈ ವಿಶೇಷ ವಿಧಿಯನ್ನು ಜಾರಿಗೆ ತರಲಾಗಿತ್ತು. ಈಗ ಇದು ರದ್ದಾದ ಕಾರಣ ಅವರ ಜೀವನದ ಮೇಲೆ ಪರಿಣಾಮ ಬೀರಬಹುದು.

–ಶ್ವೇತಾ

* ಇಷ್ಟು ದಿನ ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ, ಜಮ್ಮ ಮತ್ತು ಕಾಶ್ಮೀರದಲ್ಲೇ ಬೇರೆ ಧ್ವಜ ಹಾರಿಸಲಾಗುತ್ತಿತ್ತು. ಇನ್ನು ಮುಂದೆ ಅಲ್ಲಿಯೂ ತ್ರಿವರ್ಣ ಧ್ವಜ ಹಾರಾಡಲಿದೆ.

–ವಿಶಾಲ್‌

* ಮೊದಲು ಅವರದ್ದೇ ಬೇರೆ ನಿಯಮ, ನಮ್ಮದೇ ಬೇರೆ ನಿಯಮ ಇತ್ತು. ಈಗ ಎಲ್ಲರಿಗೂ ಸಮಾನ ಅವಕಾಶ ಸಿಗಲಿವೆ.

–ರಾಹುಲ್

* ಇದೊಂದು ಉತ್ತಮ ನಿರ್ಧಾರ. ಆ ರಾಜ್ಯದ ಆರ್ಥಿಕ ಮಟ್ಟ ಸುಧಾರಿಸುತ್ತದೆ

–ಮನೋಜ್‌

* ಈ ರದ್ದತಿ ಹಿಂದೆಯೇ ಆಗಬೇಕಿತ್ತು. ಆದರೆ ಈಗ ಆಗಿದೆ. ಪರವಾಗಿಲ್ಲ.

–ಪ್ರಮೋದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT