ಬೆಂಗಳೂರು: ಗುಜರಾತ್‌ನಲ್ಲಿ ಚುನಾವಣೆ ಪೂರ್ವ ಮತ್ತು ಚುನಾವಣೆ ನಂತರ ನಡೆಸಿದ ಸಮೀಕ್ಷೆಗಳು ಸುಳ್ಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಬಿ.ಕೆ. ರವಿ ಅವರ ‘ಮಾಡರ್ನ್ ಮೀಡಿಯಾ: ಎಲೆಕ್ಷನ್ಸ್ ಅಂಡ್ ಡೆಮಾಕ್ರಸಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗುಜರಾತ್‌ನಲ್ಲಿ ಬಿಜೆಪಿ 135 ಸೀಟು ಗೆಲ್ಲುತ್ತದೆ ಎಂದು ಮಾಧ್ಯಮಗಳು ಬಿಂಬಿಸಿದವು. ಆದರೆ, ಅಲ್ಲಿ ಎರಡಂಕಿಯನ್ನೂ ದಾಟಲು ಆ ಪಕ್ಷಕ್ಕೆ ಆಗಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂಬುದನ್ನು ಯಾರೂ ಹೇಳಲಿಲ್ಲ. ಇಂತಹ ಸಮೀಕ್ಷೆಗಳು ಜನರ ನಂಬಿಕೆ ಕಳೆದುಕೊಳ್ಳುತ್ತವೆ’ ಎಂದರು.

‘ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಆಗಲೇ ಕೆಲ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ವರದಿಗಳನ್ನು ಮಾಡಿವೆ. ಮಾಧ್ಯಮಗಳಲ್ಲಿನ ಅನಾರೋಗ್ಯಕರ ಸ್ಪರ್ಧೆಗೆ ಇದು ನಿದರ್ಶನ. ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.