ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಚಿತ್ರಸಂತೆಯನ್ನು ಇದೇ 7ಕ್ಕೆ ಏರ್ಪಡಿಸಿದೆ. ಈ ಬಾರಿಯ ಚಿತ್ರಸಂತೆ ಪರಿಸರ ವಿಕೋಪ ಹಾಗೂ ಹವಾಮಾನ ವೈಪರೀತ್ಯ ಕುರಿತಾಗಿ ಇರುತ್ತದೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ‘ಪರಿಸರ ಕಾಳಜಿ ಕುರಿತು ಕಿರುಚಿತ್ರ, ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ. ಅಮೆರಿಕದ ಕಲಾವಿದ (ದೇಹದ ಮೇಲೆ ಚಿತ್ರಕಲೆ ಬಿಡಿಸಿಕೊಳ್ಳುವ) ಗ್ರೆಗರಿ ಜಾಕ್ಸನ್ ಸಮಕಾಲೀನ ಕಲಾಭಿವ್ಯಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಪ್ರದರ್ಶನ ಕಲೆ ಪ್ರಸ್ತುತಪಡಿಸುವರು’ ಎಂದು ಹೇಳಿದರು.

ಬೆಳಿಗ್ಗೆ 7ರಿಂದ ಸಂಜೆಯವರೆಗೆ ಪರಿಷತ್ತಿನ ಆವರಣವೂ ಒಳಗೊಂಡಂತೆ ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆಯಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಗುಜರಾತ್, ರಾಜಸ್ಥಾನ... ಹೀಗೆ ವಿವಿಧ ಪ್ರದೇಶಗಳಿಂದ 2,000 ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

‘ಚಿತ್ರಸಂತೆಯಲ್ಲಿ ಮಳಿಗೆ ತೆರೆಯಲು 3,000 ಅರ್ಜಿಗಳು ಬಂದಿದ್ದವು. 1,000 ಮಂದಿಗೆ ಅವಕಾಶ ನೀಡಿದ್ದೇವೆ. ಕಲಾವಿದರು ಮಾರಾಟ ಮಾಡುವ ಕಲಾಕೃತಿಗೆ ಪರಿಷತ್ತಿನಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಎಲ್ಲ ಕಲಾವಿದರಿಗೂ ಉಚಿತವಾಗಿ ಊಟ ಹಾಗೂ ತಿಂಡಿ ವ್ಯವಸ್ಥೆ ಕಲ್ಪಿಸುತ್ತೇವೆ. ಸುಮಾರು ನಾಲ್ಕು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.

ಹಿರಿಯರು, ಅಂಧ ಹಾಗೂ ಅಂಗವಿಕಲ ಕಲಾವಿದರಿಗೆ ಪರಿಷತ್ತಿನ ಆವರಣದ ಒಳಗೆಯೇ ಮಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ವಯಸ್ಸಾದವರು ಹಾಗೂ ಅಂಗವಿಕಲರು ಚಿತ್ರ ಸಂತೆ ವೀಕ್ಷಿಸಲು ಅನುಕೂಲವಾಗುವಂತೆ ವಿಶೇಷ ವಾಹನ ವ್ಯವಸ್ಥೆ ಇರಲಿದೆ. ಜನಪದ ನೃತ್ಯ ಹಾಗೂ ಚಂದ್ರಿಕಾ ಗುರುರಾಜ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.

ಕಾರ್ಡ್ ಸೌಲಭ್ಯ: ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತದೆ. 15 ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳನ್ನು ಅಳವಡಿಸುತ್ತಿದ್ದೇವೆ. ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: ಕಲಾವಿದರಾದ ಸುಧಾ ಮನೋಹರ್, ಡಾ.ತಾರಾ ಕಶ್ಯಪ್, ಎಸ್. ಶಿವ್ ಮನೋಳಿ ಹಾಗೂ ಸೋಮಣ್ಣ ಚಿತ್ರಗಾರ್ ‘ಚಿತ್ರಕಲಾ ಸಮ್ಮಾನ್’ ಪ್ರಶಸ್ತಿಗೆ (ತಲಾ ₹25 ಸಾವಿರ ನಗದು) ಆಯ್ಕೆಯಾಗಿದ್ದಾರೆ. ಕೇರಳದ ಶಿಲ್ಪ ಕಲಾವಿದ ಕಾನಾಯ್ ಕುನ್ಹಿರಾಮನ್ ಅವರು ಎಂ.ಎಸ್. ನಂಜುಂಡರಾವ್ ಸ್ಮಾರಕ ಪ್ರಶಸ್ತಿಗೆ (₹1 ಲಕ್ಷ ನಗದು) ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.