ಲೈಂಗಿಕ ಕಿರುಕುಳ; ಕಂಪನಿ ನಿರ್ದೇಶಕನ ವಿರುದ್ಧ ಎಫ್‌ಐಆರ್‌

5

ಲೈಂಗಿಕ ಕಿರುಕುಳ; ಕಂಪನಿ ನಿರ್ದೇಶಕನ ವಿರುದ್ಧ ಎಫ್‌ಐಆರ್‌

Published:
Updated:

ಬೆಂಗಳೂರು: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದೆಹಲಿ ಮೂಲದ ‘ಲಾ ಕ್ಲಾಸಸ್‌ ಟ್ರಾನ್ಸಲೇಶನ್ಸ್’ ಕಂಪನಿ ನಿರ್ದೇಶಕ ಮನೋಹರ್ ರೋಷರ್ ಎಂಬುವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ 32 ವರ್ಷದ ಮಹಿಳೆ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು‍ ಪೊಲೀಸರು ತಿಳಿಸಿದರು.

‘ಸ್ಕೈಫೈ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ವಿಡಿಯೊ ಕರೆ ಮಾಡುತ್ತಿದ್ದ ಮನೋಹರ್, ನನಗೆ ಇಷ್ಟವಿಲ್ಲದಿದ್ದರೂ ಹೆಚ್ಚು ಹೊತ್ತು ಮಾತನಾಡುತ್ತಿದ್ದ. ಸಿನಿಮಾ, ಪಾರ್ಟಿಗೆ ಬರುವಂತೆ ಕರೆದು ಪೀಡಿಸುತ್ತಿದ್ದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘2018ರ ಮಾರ್ಚ್‌ 27ರಂದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದ ಆತ, ಹೋಟೆಲೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ ಎಂದಿದ್ದ. ನನಗೂ ಅಲ್ಲಿಗೆ ಬರುವಂತೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದ. ಅಂದಿನಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry