ಆರೋಗ್ಯ ಉತ್ಸವ ಇಂದು ಅಂತ್ಯ

7

ಆರೋಗ್ಯ ಉತ್ಸವ ಇಂದು ಅಂತ್ಯ

Published:
Updated:

ಬೆಂಗಳೂರು: ಬೆಂಗಳೂರು ಆರೋಗ್ಯ ಉತ್ಸವ ಜೂನ್‌ 17ರಂದು ಮುಕ್ತಾಯಗೊಳ್ಳಲಿದೆ.

ನಗರದ ಅರಮನೆ ಮೈದಾನದ ಮೇಖ್ರಿ ವೃತ್ತದ ಬಳಿಯ ‘ತ್ರಿಪುರವಾಸಿನಿ’ ಯಲ್ಲಿ ಸಮಾರೋಪ ನಡೆಯಲಿದೆ. ಬೆಳಿಗ್ಗೆಯಿಂದಲೇ ವೈದ್ಯಕೀಯ ಗೋಷ್ಠಿಗಳು, ವಿವಿಧ ಸ್ಪರ್ಧೆಗಳು, ಹಿರಿಯ ನಾಗರಿಕರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 5.30ಕ್ಕೆ ವೈದ್ಯಕೀಯ ಕ್ಷೇತ್ರದ 9 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುದರ್ಶನ ಬಲ್ಲಾಳ್‌ ಭಾಗವಹಿಸಲಿದ್ದಾರೆ.

ಮೇಳದಲ್ಲಿ ದಂತ, ನೇತ್ರ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುವುದು ಎಂದು ಟಿವಿ ಹೌಸ್‌ ಸಂಸ್ಥೆ ಪ್ರಕಟಣೆ ತಿಳಿಸಿದೆ. ಮಾಹಿತಿಗೆ ಮೊ. 9886464641

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry