ಸಣ್ಣ ಉಪಗ್ರಹಗಳ ಉಡ್ಡಯನಕ್ಕೆ ಇಸ್ರೊ ಸಜ್ಜು

7

ಸಣ್ಣ ಉಪಗ್ರಹಗಳ ಉಡ್ಡಯನಕ್ಕೆ ಇಸ್ರೊ ಸಜ್ಜು

Published:
Updated:
ಸಣ್ಣ ಉಪಗ್ರಹಗಳ ಉಡ್ಡಯನಕ್ಕೆ ಇಸ್ರೊ ಸಜ್ಜು

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಮಾರು 30 ಸಣ್ಣ ಉಪಗ್ರಹಗಳನ್ನು ಉಡಾಯಿಸಲಿದೆ. ಆಗಸ್ಟ್‌ ವೇಳೆಗೆ ಈ ಉಡಾವಣೆ ನಡೆಯುವ ಸಾಧ್ಯತೆಯಿದೆ.

ಭೂಮಿಯ ಮೇಲೆ ನಿಗಾ ವಹಿಸುವ ಈ ಉಪಗ್ರಹಗಳನ್ನು ವಿದೇಶಿ ಗ್ರಾಹಕರಿಗಾಗಿ ನೀಡಲಾಗುತ್ತಿದೆ. ಪಿಎಸ್‌ಎಲ್‌ವಿ – ಸಿ 42 ಉಡ್ಡಯನ ವಾಹನ ಈ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದೆ.

ಈ ಉಡ್ಡಯನ ಭಾಗಶಃ ವಾಣಿಜ್ಯ ಬಳಕೆ ಉದ್ದೇಶ ಹೊಂದಿದೆ. ಜ. 12ರಂದು ಪಿಎಸ್‌ಎಲ್‌ವಿ – ಸಿ 40 ವಾಹನವು ಕಾರ್ಟೋಸ್ಯಾಟ್‌ 2ಇ ಸಹಿತ 28 ಗ್ರಾಹಕ ಬಳಕೆ ಉಪಗ್ರಹಗಳು ಮತ್ತು ಎರಡು ಭಾರತೀಯ ಉಪಗ್ರಹಗಳನ್ನು ಹೊತ್ತೊಯ್ದಿತ್ತು.

‘ವಿದೇಶಿ ಗ್ರಾಹಕರ ಬೇಡಿಕೆ ಆಧರಿಸಿ 25ರಿಂದ 30 ಸಣ್ಣ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಒಯ್ಯಲಿದ್ದೇವೆ. ವಾಹನ ಮತ್ತು ಉಪಗ್ರಹಗಳ ಸಂರಚನೆಯ ಆಧಾರದ ಮೇಲೆ ಈ ಉಡ್ಡಯನ ನಿಂತಿದೆ. ಉಪಗ್ರಹಗಳ ಒಟ್ಟಾರೆ ತೂಕ 250 ಕೆಜಿ ಇರಬಹುದು’ ಎಂದು ಇಸ್ರೋ ಉತ್ಪನ್ನಗಳು ಮತ್ತು ಸೇವೆಗಳನ್ನು ರಫ್ತು ಮಾಡುವ ಸಂಸ್ಥೆ ಆ್ಯಂಟ್ರಿಕ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ಅಧ್ಯಕ್ಷ ರಾಕೇಶ್‌ ಶಶೊಭೂಷಣ್‌ ತಿಳಿಸಿದರು.

ಸಿ–42 ವಾಹನವು ಈಗಾಗಲೇ ಇರುವ ಗ್ರಾಹಕರು ಮಾತ್ರವಲ್ಲ, ಹೊಸ ಗ್ರಾಹಕರನ್ನೂ ಹೊಂದಿದೆ. ಇಸ್ರೊದ ಉಪಗ್ರಹಗಳ ಎಲ್ಲ ಭಾರ ಸೇರಿದರೆ ಈ ವಾಹನ 800 ಕೆಜಿಯಿಂದ 1 ಸಾವಿರ ಕೆಜಿವರೆಗೆ ತೂಗುತ್ತದೆ. ಉಡ್ಡಯನ ಕ್ಷೇತ್ರಕ್ಕೆ ಅಂತರರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ತಮ್ಮ ಸಂಸ್ಥೆ ಎರಡು ವಾಣಿಜ್ಯ ಉದ್ದೇಶಗಳ ಉಡ್ಡಯನದ ಹೊಣೆ ವಹಿಸಿದೆ ಎಂದು ಅವರು ಹೇಳಿದರು.    

‘ಒಬ್ಬ ಗ್ರಾಹಕರಿಗಾಗಿ ದೊಡ್ಡ ಗಾತ್ರದ ಒಂದೇ ಉಪಗ್ರಹವನ್ನು ಉಡ್ಡಯನ ಮಾಡುವ ಬದಲು ಇಂಥ ಸಣ್ಣ ಉಪಗ್ರಹಗಳನ್ನು ಒಂದೇ ವಾಹನದ ಮೂಲಕ ಅಂತರಿಕ್ಷಕ್ಕೆ ಸೇರಿಸುವುದು ಆರ್ಥಿಕವಾಗಿ ಲಾಭದಾಯಕ’ ಎಂದೂ ಅವರು ವಿವರಿಸಿದರು.

ಇದುವರೆಗೆ ಪಿಎಸ್‌ಎಲ್‌ವಿ ವಿದೇಶದ ಗ್ರಾಹಕರಿಗಾಗಿ 237 ಉಪಗ್ರಹಗಳನ್ನು ಉಡಾಯಿಸಿದೆ. ಕೆಲವು ಬಾರಿ  ಒಂದೊಂದೇ ಉಪಗ್ರಹಗಳನ್ನು ಉಡಾಯಿಸಲಾಗಿದೆ.

ಸಿ– 42 ಪಿಎಸ್‌ಎಲ್‌ವಿ 2018ರ ನಾಲ್ಕನೇ ಗುರಿ. ಇದೇ ವೇಳೆಗೆ ಇಂಥ ಉಪಗ್ರಹಗಳನ್ನು ದೊಡ್ಡ ಪ್ರಮಾಣದಲ್ಲಿ ಉಡಾಯಿಸಲು ಇಸ್ರೋ ಯೋಜನೆ ಹಾಕಿಕೊಂಡಿತ್ತು. 5,400 ಕೆಜಿ ತೂಕದ ಸಂವಹನ ಉಪಗ್ರಹ ಜಿಸ್ಯಾಟ್‌ –11ನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ತರಲಾಗಿದೆ. ಅದನ್ನು ಉಡಾಯಿಸುವ ದಿನಾಂಕ ನಿಗದಿಯಾಗಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry