ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 2017–18 ರ ಸಾಲಿನಲ್ಲಿ ಒಟ್ಟು 907 ಮದ್ಯದಂಗಡಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಗುರುವಾರ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ 3566 ಮದ್ಯದಂಗಡಿಗಳಿಗೆ ಪರವಾನಿಗೆ ನವೀಕರಿಸಿ ಅನುಮತಿ ನೀಡಲಾಗಿದೆ ಎಂದರು.

ಸುಪ್ರೀಂಕೋರ್ಟ್ ಆದೇಶವು ಮುನ್ಸಿಪಲ್ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ಪರವಾನಿಗೆ ನವೀಕರಿಸಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ 2016–17 ರಲ್ಲಿ 3957 ಮದ್ಯದಂಗಡಿ ಮತ್ತು 440 ಎಂಎಸ್‌ಐಎಲ್ ಶಾಪ್, 2017–18 ರಲ್ಲಿ 3893 ಮದ್ಯದಂಗಡಿ ಮತ್ತು 530 ಎಂಎಸ್‌ಐಎಲ್ ಶಾಪ್ ಆರಂಭಿಸಲು ಅನುಮತಿ ನೀಡಲಾಗಿದೆ.

ನಗರ ಜಿಲ್ಲೆ ಮದ್ಯದಂಗಡಿ ವಿವರ:

ಬೆಂಗಳೂರು ನಗರ ಜಿಲ್ಲೆ(ಪೂರ್ವ) 207, ಬೆಂಗಳೂರು ನಗರ ಜಿಲ್ಲೆ (ಪಶ್ಚಿಮ) 231, ಬೆಂಗಳೂರು ನಗರ ಜಿಲ್ಲೆ(ಉತ್ತರ) 224, ಬೆಂಗಳೂರು ನಗರ ಜಿಲ್ಲೆ(ದಕ್ಷಿಣ) 245.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.