ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.20 ಕೋಟಿ ಮೌಲ್ಯದ 72 ಬೈಕ್‌ ಜಪ್ತಿ; ತಮಿಳುನಾಡಿನ ಏಳು ಆರೋಪಿಗಳ ಬಂಧನ

Published 24 ಮೇ 2023, 4:12 IST
Last Updated 24 ಮೇ 2023, 4:12 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಐಷಾರಾಮಿ ಬೈಕ್‌ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ಏಳು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ದಿನೇಶ್, ಶಂಕರ್‌, ಅರುಣ್‌, ರಾಜೇಶ್‌, ಪೂವರಸನ್‌, ವಿನೋದ್‌ಕುಮಾರ್‌, ಕಾರ್ತಿಕ್‌ ಬಂಧಿತ ಆರೋಪಿಗಳು.

‘ಆರೋಪಿಗಳಿಂದ ರಾಯಲ್‌ ಎನ್‌ಫೀಲ್ಡ್‌ –13, ಯಮಹಾ ಆರ್‌ (15)– 6, ಪಲ್ಸರ್‌ ಎನ್‌ಎಸ್‌ (200)–8, ಪಲ್ಸರ್‌ ಎನ್‌ಎಸ್‌ (160)–2, ಬಜಾಬ್‌ ಪಲ್ಸರ್‌ (150)–22, ಹೀರೊ ಹೊಂಡಾ ಸ್ಪ್ಲೆಂಡರ್‌ –10, ಹೋಂಡಾ ಡಿಯೋ –9, ಟಿವಿಎಸ್ ಎನ್‌ಟಾರ್ಕ್‌ –1, ಟಿವಿಎಸ್‌ ಅಪ್ಪಾಚೆ–1, ಹೋಂಡಾ ಆಕ್ಟೀವಾ–1 ಸೇರಿ ಒಟ್ಟು 72 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಬೈಕ್‌ಗಳ ಒಟ್ಟು ಮೌಲ್ಯ ₹ 1.20 ಕೋಟಿಯಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆರೋಪಿಗಳು ಮೂರು ತಂಡಗಳಾಗಿ ಬೈಕ್‌ ಕಳವು ಮಾಡುತ್ತಿದ್ದರು. ಆರೋಪಿಗಳು ತಮಿಳುನಾಡಿನಿಂದ ಬಸ್‌ನಲ್ಲಿ ಬಂದು ಅತ್ತಿಬೆಲೆ, ಹೆಬ್ಬಗೋಡಿ, ಹೊಸ ರೋಡ್‌, ಗಾರ್‍ವೆಬಾವಿ ಪಾಳ್ಯ ಬಸ್‌ನಿಲ್ದಾಣದಲ್ಲಿ ಇಳಿಯುತ್ತಿದ್ದರು. ಅಲ್ಲಿಂದ ಬೊಮ್ಮನಹಳ್ಳಿ, ಬೇಗೂರು, ಮೈಕೋಲೇಔಟ್‌, ಪರಪ್ಪನ ಅಗ್ರಹಾರ, ಹೆಬ್ಬಗೋಡಿ, ಅತ್ತಿಬೆಲೆ, ಸೂರ್ಯಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು‘ ಎಂದು ಪೊಲೀಸರು ಹೇಳಿದರು.

‘ಇಬ್ಬರು ಆರೋಪಿಗಳು ಮನೆಯ ಎದುರಿಗೆ ನಿಲುಗಡೆ ಮಾಡುತ್ತಿದ್ದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಅನ್ನು ನಕಲಿ ಕೀ ಬಳಸಿ ತೆಗೆಯುತ್ತಿದ್ದರು. ಮತ್ತಿಬ್ಬರು ಅದೇ ರಸ್ತೆಯಲ್ಲಿ ಯಾರಾದರೂ ಬರುತ್ತಾರೆಯೇ ಎಂಬುದನ್ನು ಗಮನಿಸುತ್ತಿದ್ದರು. ಕಳವು ಮಾಡಿದ ವಾಹನಗಳನ್ನು ಹೊಸೂರು ಮುಖ್ಯರಸ್ತೆಯಲ್ಲಿ ಕೊಂಡೊಯ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಖರೀದಿದಾರರಿಗೆ ಬಳಿಕ ದಾಖಲಾತಿ ನೀಡಲಾಗುವುದು ಎಂದು ನಂಬಿಸುತ್ತಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT