ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

700 ಎಕರೆ ಡಿನೋಟಿಫೈ: ಸಿ.ಎಂ ವಿರುದ್ಧ ದೂರು

Last Updated 23 ಜನವರಿ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಕಾವತಿ ಬಡಾವಣೆ ಸಲುವಾಗಿ ಸ್ವಾಧೀನಪಡಿಸಿಕೊಂಡಿದ್ದ 700 ಎಕರೆ ಜಮೀನನ್ನು 2014ರ ಮಾರ್ಚ್‌ 31ರಂದು ಮುಖ್ಯಮಂತ್ರಿ- ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ ಎಂದು ವೆಂಕಟ-ರಮಣ ರೆಡ್ಡಿ ಎಂಬುವರು ಎಚ್‌.ಎಸ್‌.-ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 33 ಪುಟಗಳ ಪತ್ರವನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ ಮೂರು ದಿನಗಳ ನಂತರ ಈ ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಬಿಡಿಎ ಆಯು-ಕ್ತರ ಹೆಸರುಗಳನ್ನು ಪ್ರಸ್ತಾಪಿಸದೆ ಕೇವಲ ಅವರ ಹುದ್ದೆಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ.

‘ಇದು ಮುಖ್ಯಮಂತ್ರಿಯವರ ಗಮ-ನಕ್ಕೆ ಬರದೇ ನಡೆಯಿತು ಎಂದು ಹೇಳಲು ಸಾಧ್ಯವೇ ಇಲ್ಲ. ಇಷ್ಟೊಂದು ದೊಡ್ಡ ಹಗರಣ ಅವರ ಗಮನಕ್ಕೆ ಬಂದೇ ಆಗಿರುತ್ತದೆ. ಮುಖ್ಯಮಂತ್ರಿ ಮತ್ತು ಬಿಡಿಎ ಆಯುಕ್ತರು, ರಿಯಲ್‌ ಎಸ್ಟೇಟ್‌ ಏಜೆಂಟರು, ಭೂ ಮಾಫಿಯಾ-ಗಳ ಜತೆ ಸೇರಿ ಈ ಅಕ್ರಮ ಎಸಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

1 ಲಕ್ಷ ಲಂಚ ಕೇಳಿದರು!
‘ಒಂದು ಗುಂಟೆ ಜಮೀನು ಡಿನೋ-ಟಿಫೈ ಮಾಡುವುದಕ್ಕೆ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಬೋರಯ್ಯ ಮತ್ತು ಇತರ ಅಧಿಕಾರಿಗಳು  ಒಂದು ಲಕ್ಷ ರೂಪಾಯಿ ಲಂಚ ಕೇಳಿದ್ದರು’ ಎಂದು ಭೂಮಾಲೀಕ ವೈ.ಎಸ್‌.-ನರೇಂದ್ರ ಕುಮಾರ ಎಂಬುವರು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಆರನೇ ಮಾರ್ಗಸೂಚಿ ಪ್ರಕಾರ ಜಕ್ಕೂರಿನಲ್ಲಿರುವ ನನ್ನ 24 ಗುಂಟೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಬೇಕಿತ್ತು. ಆದರೆ, ನನ್ನ ಹಾಗೆ ಇರುವ ನನ್ನ ಸುತ್ತಮುತ್ತಲಿನ ಜಮೀನು-ಗಳನ್ನು ಡಿನೋಟಿಫೈ ಮಾಡಲಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿ-ದ್ದಾರೆ.

‘ಸರ್ವೆ ನಂಬರ್ 1/10, 20/1, 20/6, 20/2 ಮತ್ತು 61ರಿಂದ 63ರ-ವರೆ-ಗಿನ ಜಮೀನು-ಗಳನ್ನು ಅಧಿಸೂಚನೆ-ಯಿಂದ ಕೈಬಿಡಲಾಗಿದೆ. ಆದರೆ, 66/6 ಸರ್ವೆ ನಂಬರ್‌ನಲ್ಲಿನ ನನ್ನ ಜಮೀನನ್ನು ಕೈಬಿಟ್ಟಿಲ್ಲ. ಲಂಚ ಕೊಟ್ಟವರ ಜಮೀನು-ಗಳನ್ನು (ಸರ್ವೆ ನಂಬರ್‌ 1/10, 20/6, 20/8 ಮತ್ತು 20/2) ಡಿನೋ-ಟಿಫೈ ಮಾಡಲಾಗಿದೆ. ಇದಕ್ಕೆ ಬೇಕಾದರೆ ದಾಖಲೆ ಒದಗಿಸುವುದಾಗಿ’ ನರೇಂದ್ರ ಕುಮಾರ್‌ ಅವರು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT