ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಮಂದಿ ಅಂತರರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

Last Updated 25 ಫೆಬ್ರವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜಕ್ಕೂರು ಡಬ್ಬಲ್‌ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಟು ಮಂದಿ ಅಂತರ ರಾಜ್ಯ ಡ್ರಗ್ಸ್‌ ಪೆಡ್ಲರ್‌ ಗಳನ್ನು ಅಮೃತಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರ್‌ ಹೈಂದೂರಿನ ಮಬಿನ್‌ (32), ಚಿರಕಲ್ ಗ್ರಾಮದ ಮನ್ಸೂರ್‌ (36), ಪಾರೇಗೌಡ ಹೌಸ್‌ನ ಅಭಿಷೇಕ್ (27), ಕನಮ್‌ಕೋಟ್‌ ಗ್ರಾಮದ ಅಕ್ಷಯ್‌ ಶಿವನ್‌ ಅಲಿಯಾಸ್ ಅಕ್ಕಿ (28), ಚೆಂಗಲ್ಲೂರಿನ ಅರ್ಜುನ್‌ (26), ಚೆಂಗಲ್ಲೂರು ಅಖಿಲ್‌ (26), ಕೊಟ್ಟಪುರಂನ ಜೋಯಲ್‌ ಜೋಶ್‌ (21), ಕಣ್ಣೂರಿನ ಪೃಥ್ವಿನ್ (23) ಬಂಧಿತರು.

ಕೇರಳದಿಂದ ಬೆಂಗಳೂರಿಗೆ ಬಂದು ಬೇರೆ ಬೇರೆ ವೃತ್ತಿ ನಡೆಸುತ್ತಿದ್ದರು. ಜತೆಗೆ ಡ್ರಗ್ಸ್‌ ಪೆಡ್ಲರ್‌ ಆಗಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿದ 740 ಗ್ರಾಂ ಮೆಥ ಕ್ಯೂಲನ್‌, 200 ಗ್ರಾಂ ಗಾಂಜಾ, 165 ಗ್ರಾಂ ಚರಸ್‌, 20 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ದ್ವಿಚಕ್ರ ವಾಹನ, ಒಂದು ಕಾರು, 7 ಮೊಬೈಲ್‌, ಖಾಲಿ ಜಿಪ್‌ಲಾಕ್‌ ಪ್ಲಾಸ್ಟಿಕ್‌ ಕವರ್‌ ಸೇರಿದಂತೆ ₹ 50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳಿಂದ ಮಾದಕ ದ್ರವ್ಯಗಳನ್ನು ಖರೀದಿಸಿ ಸೇವನೆ ಮಾಡುತ್ತಿದ್ದ ಗ್ರಾಹಕರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಮಬಿನ್‌, ಮನ್ಸೂರ್ ಅವರು ಡಬ್ಬಲ್‌ ರಸ್ತೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಜಾಲ ಪತ್ತೆ ಆಯಿತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT