ಬೆಂಗಳೂರು: ನಗರದ ಆಕಾಶ್ ಇನ್ಸ್ಟಿಟೂಟ್ನ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇಂದಿರಾನಗರ ಶಾಖೆಯ ವಿದ್ಯಾರ್ಥಿ ಆದರ್ಶ್ ಕುಮಾರ್ ಬೆಹೆರಾ ಅವರು ಶೇ 99.99 ಅಂಕ ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಫೆಬ್ರುವರಿ 16ರಂದು ಫಲಿತಾಂಶವನ್ನು ಘೋಷಿಸಿದ್ದು ನಗರದ ವಿವಿಧ ಶಾಖೆಗಳ 30ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಆಯುಷ್ ಎಸ್.ಕೋಲೇಕರ್ (ಶೇ 99.98), ಪ್ರನಿಲ್ ಸಿಂಗಿ (ಶೇ 99.96), ಆದರ್ಶ್ ದಾಸ್ (ಶೇ 99.89), ಗೋಕುಲ್ ಹರಿಕೃಷ್ಣನ್ (ಶೇ 99.88), ನಮನ್ ಅಗರ್ವಾಲ್ (ಶೇ 99.85), ಟಿ.ಆರ್.ಎಸ್.ಸಂಜಿತ್ (ಶೇ 99.82), ಗುಡಾಲ್ ಸತ್ಯ ಯಶಸ್ಸ್ (ಶೇ 99.72), ಜೋಹಾನ್ ಜಾಬ್ (ಶೇ 99.69), ವ್ಯೋಮ್ ಗುಪ್ತ (ಶೇ 99.66), ಶಿವಾಂಶ್ ಪಂತ್ (ಶೇ 99.64), ಆದಿತ್ಯ (ಶೇ 99.61), ನಿತಿನ್ ಎಸ್. ಕೋಲೇಕರ್ (ಶೇ 99.48), ದರ್ಶನ್ ಹರೀಶ್ (ಶೇ 99.45), ಕೌಶಲ್ ಗುಂಡು (ಶೇ 99.44), ಆದಿತ್ಯ ಶರ್ಮ (ಶೇ 99.41) ಮತ್ತು ಅದ್ವೈತ್ ರವೀಂದ್ರನ್ (ಶೇ 99.35) ಉತ್ತಮ ಸ್ಥಾನ ಪಡೆದಿದ್ದಾರೆ.

‘ನಗರದ ವಿದ್ಯಾರ್ಥಿಗಳ ಅಸಾಧಾರಣ ಸಾಧನೆ ಅವರ ಪರಿಶ್ರಮ ಮತ್ತು ಆಕಾಶ್ನ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ಕಠಿಣ ಪರಿಶ್ರಮದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ’ ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ನ ಮುಖ್ಯ ಶೈಕ್ಷಣಿಕ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ 14 ವಿದ್ಯಾರ್ಥಿಗಳು ಶೇ 99.99 ಅಂಕ ಪಡೆದಿದ್ದಾರೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶೇ 99ಕ್ಕೂ ಅಧಿಕ ಅಂಕ ಪಡೆದಿದ್ದು, 400ಕ್ಕೂ ಅಧಿಕ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಆಕಾಶ್ ಸಂಸ್ಥೆ ಬೆಂಗಳೂರಿನಲ್ಲಿ 11 ಹಾಗೂ ರಾಜ್ಯದ ವಿವಿಧ ನಗರಗಳಲ್ಲಿ ಎಂಟು ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ನ ಪ್ರಾದೇಶಿಕ ಮುಖ್ಯಸ್ಥ ವಿಜಯ್ ಭಾಸ್ಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.