ಬೆಂಗಳೂರು: ಹೊಸೂರು ಮುಖ್ಯರಸ್ತೆಯ ಎನ್‌ಟಿಟಿಎಫ್ ಕಾಲೇಜು ಬಳಿ ಶುಕ್ರವಾರ ಬೆಳಿಗ್ಗೆ ಲಾರಿಯೊಂದು ಬೈಕ್‌ಗೆ ಗುದ್ದಿದ್ದರಿಂದಾಗಿ ಸವಾರ ಎಸ್. ರಘು (52) ಎಂಬುವರು ಮೃತಪಟ್ಟಿದ್ದಾರೆ.

‘ಹೊಸೂರಿನ ರಘು, ಯಶವಂತಪುರ ಈರುಳ್ಳಿ ಮಂಡಳಿಯಲ್ಲಿ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದರು. ವಿದ್ಯಾರಣ್ಯಪುರದಲ್ಲಿ ವಾಸವಿದ್ದರು. ಹೊಸೂರಿನಲ್ಲಿರುವ ತಾಯಿಯನ್ನು ಮಾತನಾಡಿಸಲು ಹೋಗಿದ್ದ ಅವರು ವಾಪಸು ಬೆಂಗಳೂರಿಗೆ ಬರುತ್ತಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ವೀರಸಂದ್ರ ಕಡೆಯಿಂದ ವೇಗವಾಗಿ ಬಂದ ಲಾರಿ, ರಘು ಅವರ ಬೈಕ್‌ಗೆ ಗುದ್ದಿತ್ತು. ರಸ್ತೆಯಲ್ಲಿ ಬಿದ್ದಿದ್ದ ರಘು ಮೇಲೆಯೇ ಲಾರಿ ಚಕ್ರ ಹರಿದು ಹೋಗಿತ್ತು. ಸ್ಥಳದಲ್ಲೇ ಅವರು ಮೃತಪಟ್ಟರು.’

‘ಅಪಘಾತ ಸಂಬಂಧ ಲಾರಿ ಚಾಲಕ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.