ಬುಧವಾರ, ಫೆಬ್ರವರಿ 8, 2023
18 °C

ಅಮೆರಿಕದಲ್ಲಿ ಅಪಘಾತ: ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ವೈದ್ಯರಿಂದ ಮರುಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದಲ್ಲಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸು
ತ್ತಿದ್ದ ಯುವಕನೊಬ್ಬ ನಿಗೆ ಸಕ್ರಾವರ್ಲ್ಡ್‌ ಆಸ್ಪತ್ರೆ ವೈದ್ಯರು ಮರುಜೀವ ನೀಡಿದೆ

ಪ್ರವೀಣ್‌ ರಾಜ್‌ ರಾಧಾ(36) ಎಂಬುವವರಿಗೆ ಕಳೆದ ವರ್ಷ ಮೇನಲ್ಲಿ ಅಪಘಾತ ಸಂಭವಿಸಿತ್ತು. ಮಿದುಳು ಇತರ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಕೋಮಾ ಸ್ಥಿತಿಗೆ ತಲುಪಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ಬದುಕುಳಿಯುವ ಸಾಧ್ಯತೆ ಶೇ 1ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ವಿಶೇಷ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆತಂದು ಸಕ್ರಾವರ್ಲ್ಡ್‌ ಆಸ್ಪತ್ರೆಗೆ ದಾಖಲಿಸ ಲಾಯಿತು.

‘ನಾವು ಅವರನ್ನು ಉಳಿಸಿಕೊಂಡಿ ದ್ದೇವೆ’ ಎಂದು ಆಸ್ಪತ್ರೆಯ ನರ ಪುನಶ್ಚೇತನ ವಿಭಾಗದ ಮುಖ್ಯಸ್ಥ ಡಾ. ಮಹೇಶ್ವರಪ್ಪ ತಿಳಿಸಿದ್ದಾರೆ.

‘ಮಿದುಳಿನ ಆಘಾತದಿಂದ ಬಳಲುತ್ತಿರುವವರ ಗುಣಪಡಿಸುವ ಪ್ರಕ್ರಿಯೆಯಲ್ಲಿ ನರಪುನಶ್ಚೇತನ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದ್ದಾರೆ.

 ‘3–4 ತಿಂಗಳ ನಿರಂತರ ಚಿಕಿತ್ಸೆ ನಂತರ ಪ್ರವೀಣ್‌ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ದೈನಂದಿನ ಬಹುತೇಕ ಚಟುವಟಿಕೆಗಳನ್ನು ತಾವೇ ಕೈಗೊಳ್ಳುತ್ತಿದ್ದಾರೆ ಎಂದು ಡಾ. ಮಹೇಶ್ವರಪ್ಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು