ಭಾನುವಾರ, ಆಗಸ್ಟ್ 25, 2019
24 °C

ಕಾರಿಗೆ ಬೈಕ್‌ ಗುದ್ದಿಸಿ ಮೊಬೈಲ್ ಕದ್ದರು !

Published:
Updated:

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ 5ನೇ ಮುಖ್ಯರಸ್ತೆಯ ಸಿಗ್ನಲ್‌ನಲ್ಲಿ ಉದ್ಯಮಿಯೊಬ್ಬರ ಕಾರಿಗೆ ಬೈಕ್‌ ಗುದ್ದಿಸಿದ್ದ ಅಪರಿಚಿತನೊಬ್ಬ, ಕಾರಿನಲ್ಲಿದ್ದ ಮೊಬೈಲ್ ಕದ್ದೊಯ್ದಿದ್ದಾನೆ.

ಆ ಸಂಬಂಧ ಉದ್ಯಮಿ ಸಾಜಿದ್ ಹಸೈನ್ ಎಂಬುವರು ಎಚ್‌ಎಸ್‌ಆರ್‌ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

‘ಜುಲೈ 29ರಂದು ಸಂಜೆ ಕಚೇರಿಯಿಂದ ಮನೆಗೆ ಹೊರಟಿದ್ದೆ. ಸಿಗ್ನಲ್ ಬಳಿ ನನ್ನ ಕಾರಿಗೆ ಅಪರಿಚಿತನೊಬ್ಬ ಹಲವು ಬಾರಿ ತನ್ನ ಬೈಕ್ ಗುದ್ದಿಸಿದ್ದ. ಆಗ ನಿಧಾನವಾಗಿ ಕಾರು ಓಡಿಸಿದ್ದೆ. ಮತ್ತೊಂದು ಬೈಕ್‌ನಲ್ಲಿ ಬಂದಿದ್ದ ಇನ್ನೊಬ್ಬ, ಕಾರಿನ ಗಾಜು ಬಡೆದಿದ್ದ. ಗಾಜು ತೆರೆಯುತ್ತಿದ್ದಂತೆ ಕಾರಿನಲ್ಲಿದ್ದ ಐಫೋನ್ ಮೊಬೈಲ್ ಕದ್ದೊಯ್ದಿದ್ದಾನೆ’ ಎಂದು ಸಾಜಿದ್ ದೂರಿನಲ್ಲಿ ತಿಳಿಸಿದ್ದಾರೆ. 

Post Comments (+)