ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಪಿ ಶೋಭಾ ಕಟಾವ್ಕರ್ ಸಾವು: ಯುಡಿಆರ್ ದಾಖಲು

Last Updated 17 ಏಪ್ರಿಲ್ 2022, 2:37 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ. ನಗರ 5ನೇ ಹಂತದಲ್ಲಿರುವ ವಸತಿ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಎಸಿಪಿ ಶೋಭಾ ಕಟಾವ್ಕರ್ (59) ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಗ್ಗೆ ನಗರದ ಪುಟ್ಟೇನಹಳ್ಳಿ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿದೆ.

ನಗರದ ವಿಶೇಷ ವಿಭಾಗದ ಎಸಿಪಿ ಆಗಿದ್ದ ಶೋಭಾ ಅವರಿಗೆ ಇತ್ತೀಚೆಗಷ್ಟೇ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಹುಬ್ಬಳ್ಳಿ ಹೆಸ್ಕಾಂ ಅಧೀಕ್ಷಕರಾಗಿಯೂ ವರ್ಗಾಯಿಸಲಾಗಿತ್ತು.

‘ಶೋಭಾ ಅವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದ್ಯ ಪುತ್ರಿ, ಪುತ್ರ ಹಾಗೂ ಸೊಸೆ ಜೊತೆಯಲ್ಲಿ ವಾಸವಿದ್ದರು. ಆ ಮೂವರು ಇತ್ತೀಚೆಗೆ ಪ್ರವಾಸಕ್ಕೆ ಹೋಗಿದ್ದರು. ಹೀಗಾಗಿ, ಶೋಭಾ ಅವರೊಬ್ಬರೇ ಮನೆಯಲ್ಲಿದ್ದರು. ಶುಕ್ರವಾರ ಮಧ್ಯಾಹ್ನದಿಂದಲೇ ಶೋಭಾ ಅವರ ಮೊಬೈಲ್‌ಗೆ ಮಗ ಕರೆ ಮಾಡಿದ್ದರು. ಆದರೆ, ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಭದ್ರತಾ ಸಿಬ್ಬಂದಿಯನ್ನು ಫ್ಲ್ಯಾಟ್‌ ಬಳಿ ಕಳುಹಿಸಿದಾಗಲೇ ಮೃತದೇಹ ಕಂಡಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಶನಿವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT