ಮಿತಿ ಮೀರಿದ ಪ್ರಗತಿಯಿಂದ ಬೆಂಗಳೂರಿನಂತಹ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನ ಅನಾರೋಗ್ಯವನ್ನು ತಂದುಕೊಳ್ಳುವಂತಾಗಿದೆ. ಕಸ ನಿರ್ವಹಣೆ ಮಲಿನ ನೀರು ಸಂಸ್ಕರಣೆ ವೈಜ್ಞಾನಿಕವಾಗಿ ಆಗದೇ ಅಂತರ್ಜಲವೂ ಕಲುಷಿತಗೊಂಡು ತೆಂಗಿನ ನೀರು ಕೂಡ ಪರೋಕ್ಷವಾಗಿ ರೋಗಗಳನ್ನು ತರುತ್ತಿದೆ. ಚರಂಡಿ ಇಲ್ಲದೇ ರಸ್ತೆಗಳ ಸುಧಾರಣೆಯೂ ಆಗುತ್ತಿಲ್ಲ. ಆಡಳಿತದಲ್ಲಿರುವವರು ಈ ಮೂರು ವಿಷಯಗಳ ಕುರಿತು ಗಮನ ಹರಿಸಬೇಕು ಎಂದು ಡಾ.ಸಿ.ಎನ್.ಮಂಜುನಾಥ್ ಕಿವಿಮಾತು ಹೇಳಿದರು.