ಬುಧವಾರ, ಡಿಸೆಂಬರ್ 2, 2020
16 °C

ಬೀದಿವ್ಯಾಪಾರ ಉತ್ತೇಜನಕ್ಕೆ ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಡಿಜಿಟಲೀಕರಣದ ಯುಗದಲ್ಲಿ ಸಣ್ಣ ಮತ್ತು ಬೀದಿ ವ್ಯಾಪಾರಕ್ಕೆ ಹೊಡೆತ ಬೀಳುವುದನ್ನು ತಪ್ಪಿಸಲು ಬೀದಿ ವ್ಯಾಪಾರಿಗಳೂ ಆನ್ ಲೈನ್ ವ್ಯಾಪಾರ ಮಾಡಲು ಅನುಕೂಲ ಆಗುವಂತೆ ‘ಬೋಹ್ನಿ’ ಮೊಬೈಲ್ ಆ್ಯಪ್ ಪರಿಚಯಿಸುವ ಅಭಿಯಾನ ಆರಂಭ ಗೊಂಡಿದೆ.

ಈ ಮೂಲಕ ಸಣ್ಣ ವ್ಯಾಪಾರಿಗಳಿಗೂ ‘ಡಿಜಿಟಲ್ ವೇದಿಕೆ’ ಕಲ್ಪಿಸಿಕೊಡುವ ಉದ್ದೇಶದಿಂದ ‘ದಿ ಫಾರ್ವರ್ಡ್ ಫೌಂಡೇಷನ್’ ಸದಸ್ಯರು ಎಚ್ಎಸ್ಆರ್ ಬಡಾವಣೆಯ ಬೀದಿ ವ್ಯಾಪಾರಿಗಳ ನಡುವೆ ಭಾನುವಾರ ಪ್ರಚಾರ ಅಭಿಯಾನ ನಡೆಸಿದರು. ಆ್ಯಪ್ ಹೊಂದಿರು
ವವರು ತಮ್ಮ ಸರಕುಗಳ ಬಗ್ಗೆ ಮಾಹಿತಿ ನೀಡಬಹುದು.

ಗ್ರಾಹಕರು ‘ಬೈನೋ’ ಎಂಬ ಅಪ್ಲಿಕೇಷನ್ ಮೂಲಕ ವ್ಯಾಪಾರಿ ಗಳನ್ನುಸಂಪರ್ಕಿಸಬಹುದು. ಇದರಿಂದ ಸಣ್ಣಪುಟ್ಟ ದಿನಬಳಕೆಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಹೋಗಲೇಬೇಕಾದ ಅನಿವಾರ್ಯತೆ ಇದರಿಂದ ತಪ್ಪಲಿದೆ. ಇದು ಮಾರಾಟಗಾರ ಮತ್ತು ಗ್ರಾಹಕ ಇಬ್ಬರಿಗೂ ಅನುಕೂಲ ಆಗಲಿದೆ. ಸ್ಥಳೀಯ ಆರ್ಥಿಕತೆಯ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದ್ದು, ಪ್ರಧಾನಿಗಳ ಆತ್ಮನಿರ್ಭರ್ ಪರಿಕಲ್ಪನೆಯನ್ನು ಸಾಕಾರಗೊಳಿಸಿದಂತಾಗುತ್ತದೆಎಂಬುದು ಆ್ಯಪ್ ಪ್ರಚಾರಕರ ಅಭಿಪ್ರಾಯ.

‘ಇದೇ ಆ್ಯಪ್ ಬಳಸಿ ಬೀದಿ ವ್ಯಾಪಾರಿಗಳು ಪ್ರಧಾನಮಂತ್ರಿಸ್ವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಫಾರ್ವರ್ಡ್ ಫೌಂಡೇಷನ್‌ನ ಸ್ವಯಂಸೇವಕರು ಸ್ವನಿಧಿ ಸಾಲ ಪಡೆಯಲು ಬೇಕಾದ ಬ್ಯಾಂಕ್ ವ್ಯವಹಾರಕ್ಕೆ ಸಹಾಯ ಮಾಡಲಿದ್ದಾರೆ. ₹10 ಸಾವಿರ ಕಿರುಸಾಲ ಸಿಗಲಿದೆ’ ಎಂದು ಫೌಂಡೇಷನ್ ಮುಖ್ಯಸ್ಥೆ ಲತಾ ನರಸಿಂಹಮೂರ್ತಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.