ಭಾನುವಾರ, ಅಕ್ಟೋಬರ್ 25, 2020
26 °C

ಎ–4 ಅಳತೆಯ ಕಾಗದ ಬಳಸಲು ಕೋರಿ ಹೈಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೈಕೋರ್ಟ್ ಸೇರಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಎ–4 ಅಳತೆಯ ಕಾಗದದ ಎರಡೂ ಬದಿಯಲ್ಲಿ ಮುದ್ರಣಕ್ಕೆ ಬಳಸುವಂತೆ ನಿರ್ದೇಶನ ನೀಡಲು ಕೋರಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಆಕೃತಿ ಅಗರ್‌ವಾಲ್‌, ಎಂ. ಭಾವನಾ ಮತ್ತು ಲಕ್ಷ್ಯ ಪುರೋಹಿತ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ನೀಡಿತು.

ಪರಿಸರ ರಕ್ಷಣೆ ದೃಷ್ಟಿಯಿಂದ ಎಲ್ಲಾ ನ್ಯಾಯಾಲಯಗಳಲ್ಲೂ ಎ–4 ಅಳತೆಯ ಕಾಗದವನ್ನು ಎರಡೂ ಬದಿಯಲ್ಲಿ ಮುದ್ರಣಕ್ಕೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ 2020 ಮಾರ್ಚ್‌ 5ರಂದು ಸುತ್ತೋಲೆ ಹೊರಡಿಸಿತ್ತು. ಅರ್ಜಿಯೊಂದಿಗೆ ಈ ಸುತ್ತೋಲೆಯ ಪ್ರತಿಯನ್ನೂ ವಿದ್ಯಾರ್ಥಿಗಳು ದಾಖಲಿಸಿದ್ದಾರೆ.

‘ಸದ್ಯ ಫುಲ್‌ಸ್ಕೇಪ್, ಲೀಗಲ್ ಸೈಜ್ ಮತ್ತು ಎ–4 ಅಳತೆಯ ಕಾಗದವನ್ನು ಬಳಸಲಾಗುತ್ತಿದೆ. ಬ್ರಿಟಿಷರ ಕಾಲದಲ್ಲಿ ಅಳವಡಿಸಿಕೊಂಡಿದ್ದ ಫುಲ್‌ಸ್ಕೇಪ್ ಕಾಗದ ಬಳಸುವ ಪದ್ಧತಿ ಈಗಲೂ ಮುಂದುವರಿದಿದೆ. ಎ–4 ಅಳತೆಯ ಕಾಗದ ಬಳಸುವ ಬಗ್ಗೆ ತ್ರಿಪುರ ಮತ್ತು ಕೊಲ್ಕತ್ತಾ ಹೈಕೋರ್ಟ್‌ ಈಗಾಗಲೇ ಆದೇಶ ಹೊರಡಿಸಿವೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು