ಕೆ.ಆರ್.ಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹುಟ್ಟುಹಬ್ಬದ ಅಂಗವಾಗಿ ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಮಂಡಲದ ವಿವಿಧೆಡೆ ಸೇವಾ ಕಾರ್ಯಕ್ರಮ ಕೈಗೊಳ್ಳಲಾಯಿತು.

ಜ್ಯೋತಿಪುರ ಗ್ರಾಮದ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಅವರೊಂದಿಗೆ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು. ಹೊಸೂರು ಬಂಡೆ ಗೋ ಆಶ್ರಮದಲ್ಲಿ ಗೋ ಪೂಜೆ ನೆರವೇರಿಸಿ ರಾಸುಗಳಿಗೆ ಮೇವು ಮತ್ತು ಬೆಲ್ಲ ವಿತರಣೆ ಮಾಡಿದರು.

ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಅಂಗವಿಕಲರಿಗೆ ಸೈಕಲ್ ವಿತರಣೆ, ರಕ್ತದಾನ ಶಿಬಿರ, ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿಗೆ ಬಹುಮಾನ ವಿತರಣೆ ಮಾಡಿದರು.

ದೊಡ್ಡಗುಬ್ಬಿಯ ಎಐಆರ್ ವೃದ್ಧ ಆಶ್ರಮದಲ್ಲಿ ಹಣ್ಣು, ಬಟ್ಟೆ ವಿತರಣೆ, ಕಾಡುಬಿಸನಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋರ್ಟ್ಸ್ ಜಾಕೆಟ್ ವಿತರಣೆ, ಅಶ್ವತ್ಥನಗರದಲ್ಲಿ 1,500 ಮಹಿಳೆಯರಿಗೆ ಸೀರೆ ವಿತರಣೆ, 2000 ಜನರಿಗೆ ಅನ್ನದಾನ ಜೊತೆಗೆ ಸ್ನೇಹಜೀವಿ ಆಶ್ರಮಕ್ಕೆ ಹೊಸ ಆಂಬುಲೆನ್ಸ್ ವಾಹನ ನೀಡಿದರು.

ಮುನ್ನೇನಕೊಳಾಲು ಮಂಜುನಾಥ್ ಬಡಾವಣೆಯಲ್ಲಿ ಆಹಾರ ದಿನಸಿ ಕಿಟ್, ಹೂಡಿ ಸ್ಪೋರ್ಟ್ಸ್ ಕ್ಲಬ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಬಿಜೆಪಿ ಮಹದೇವಪುರ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಎಚ್.ಎಸ್.ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಮುಖಂಡರಾದ ಸಿದ್ದಾಪುರ ಗಿರಿರಾಜ್ ಗೌಡ, ದೊಡ್ಡಕನ್ನಲ್ಲಿ ವಾರ್ಡ್ ಅಧ್ಯಕ್ಷ ಕೈಕೊಂಡ್ರಹಳ್ಳಿ ಪ್ರದೀಪ್ ಕುಮಾರ್, ಕಣ್ಣೂರು ಅಶೋಕ್, ಗುಟ್ಟಾ ಮಾರಪ್ಪ, ನಲ್ಲೂರಹಳ್ಳಿ ಚಂದ್ರಶೇಖರ್ ರೆಡ್ಡಿ, ಅನಂತರಾಮಯ್ಯ, ಜಯದೇವ್, ಸಿದ್ದಾಪುರ ಗಗನ್ ಗೌಡ ಇದ್ದರು.ಸ

ಅರವಿಂದ ಲಿಂಬಾವಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಮಹಾದೇವಪುರ ಕ್ಷೇತ್ರದಾದ್ಯಂತ ಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ.
– ಮಂಜುಳಾ ಲಿಂಬಾವಳಿ, ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.