ಬೆಂಗಳೂರು: ಇನ್ನೊನೆಕ್ಸ್ಟ್ ಮೈಂಡ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಇದೇ 24ರಂದು ಮಲ್ಲೇಶ್ವರದ ಮಂತ್ರಿಸ್ಕ್ವೇರ್ ಮಾಲ್ನ ಐನಾಕ್ಸ್ನಲ್ಲಿ ಆಯೋಜಿಸಿರುವ ಆಸ್ಟ್ರೋನೊಮಿ ಎಕ್ಸ್ಪೊ–1.0ಗೆ ಚಾಲನೆ ನೀಡಲಾಗುತ್ತದೆ.

ಈ ಎಕ್ಸ್ಪೊದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಕೆ, ನಾವೀನ್ಯತೆ, ಸಂವಾದಗಳ ಮೂಲಕ ಬಾಹ್ಯಾಕಾಶ ಶಿಕ್ಷಣವನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ. ಇಲ್ಲಿ ಭಾರತದ ಮೊದಲ ಶೈಕ್ಷಣಿಕ ರಾಕೆಟ್ ಲ್ಯಾಬ್ನ ಉದ್ಘಾಟನೆ, ಬಾಹ್ಯಾಕಾಶ ಕಲಿಕಾ ಅಪ್ಲಿಕೇಶನ್ ಬಿಡುಗಡೆ, ಸಂವೇದಿ ಹಾಗೂ ಅನುಭವ ಆಧಾರಿತ ಶಿಕ್ಷಣಕ್ಕೆ ಸಹಾಯಕವಾಗಲಿದೆ. ಡಾಲ್ಬಿ ಅಟ್ಮೋಸ್ ತಂತ್ರಜ್ಞಾನದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ 3ಡಿ ಚಿತ್ರ ಪ್ರದರ್ಶನ ನಡೆಯಲಿದೆ. ಇಸ್ರೊ ಮತ್ತು ನಾಸಾ ವಿಜ್ಞಾನಿಗಳೊಂದಿಗೆ ನೇರ ಸಂವಾದ ನಡೆಸಲು ಅವಕಾಶವಿದೆ. ಈ ಎಕ್ಸ್ ಪೊದಲ್ಲಿ 150ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.