ಶುಕ್ರವಾರ, ಜನವರಿ 22, 2021
28 °C

ಪ್ರಾಧ್ಯಾಪಕಿಯ ಪರ್ಸ್‌ ಕದ್ದು ₹ 1 ಲಕ್ಷ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಧ್ಯಾಪಕಿಯೊಬ್ಬರ ಪರ್ಸ್‌ ಕದ್ದಿರುವ ಕಳ್ಳರು, ಅದರಲ್ಲಿದ್ದ ಡೆಬಿಟ್‌ ಕಾರ್ಡ್‌ ಬಳಸಿಕೊಂಡು, ಅವರ ಬ್ಯಾಂಕ್‌ ಖಾತೆಯಿಂದ ₹ 1 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪ್ರಾಧ್ಯಾಪಕಿಯು ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. 

‘ಬಿಟಿಎಂ 1ನೇ ಹಂತದ ನಿವಾಸಿ ಆಗಿರುವ ಪ್ರಾಧ್ಯಾಪಕಿ ಇದೇ 8ರಂದು ಬೆಳಿಗ್ಗೆ ಉಬರ್‌ ಕ್ಯಾಬ್‌ನಲ್ಲಿ ಸುಚಿತ್ರ ಫಿಲಂ ಸೊಸೈಟಿಗೆ ಹೋಗಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಮಧ್ಯಾಹ್ನ 1.45ರ ಸುಮಾರಿಗೆ ಹೊರಗೆ ಬಂದಿದ್ದರು. ಅದೇ ಸಂದರ್ಭದಲ್ಲಿ ಪರ್ಸ್‌ ಅವರ ಬಳಿ ಇರಲಿಲ್ಲ. ಪರ್ಸ್‌ ಕಳ್ಳತನವಾಗಿರುವ ಅನುಮಾನ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ಡೆಬಿಟ್, ಕ್ರೆಡಿಟ್ ಮತ್ತು ಪ್ಯಾನ್‌ ಕಾರ್ಡ್‌ ಹಾಗೂ ₹ 2,800 ನಗದು ಪರ್ಸ್‌ನಲ್ಲಿತ್ತು. ಕೆಲ ಹೊತ್ತಿನ ಬಳಿಕ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಆದ ಬಗ್ಗೆ ಸಂದೇಶ ಬಂದಿತ್ತು. ಅದನ್ನು ನೋಡಿ ಗಾಬರಿಗೊಂಡ ಪ್ರಾಧ್ಯಾಪಕಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು