ಮಂಗಳವಾರ, ಸೆಪ್ಟೆಂಬರ್ 17, 2019
24 °C

ಎಟಿಎಂನಿಂದ ₹ 2.89 ಲಕ್ಷ ಕಳವು

Published:
Updated:

ಬೆಂಗಳೂರು: ಎಟಿಎಂ ಮೆಷಿನ್‌ ತುಂಡರಿಸಿ ಅಪರಿಚಿತರು ₹ 2.89 ಲಕ್ಷ ದೋಚಿದ ಘಟನೆ ಬನಶಂಕರಿ ಎರಡನೇ ಹಂತದ ಶಾಸ್ತ್ರಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಎಟಿಎಂ ಕೇಂದ್ರಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಅಲ್ಲದೆ, ಭದ್ರತಾ ಸಿಬ್ಬಂದಿಯನ್ನೂ ನೇಮಿಸಿರಲಿಲ್ಲ. ಅದನ್ನು ಅರಿತಿದ್ದ ಅಪರಿಚಿತರು, ಹಣ ದೋಚಿದ್ದಾರೆ ಎಂದು ಗೊತ್ತಾಗಿದೆ.

ಆಕ್ಸಿಸ್‌ ಬ್ಯಾಂಕಿನ ಎಟಿಎಂ ಮೆಷಿನ್‌ಅನ್ನು ಗ್ಯಾಸ್‌ ಕಟ್ಟರ್‌ನಿಂದ ತುಂಡರಿಸಿ ಕಳವು ಮಾಡಲಾಗಿದೆ.ಗ್ರಾಹಕರೊಬ್ಬರು ಮಂಗಳವಾರ ಮಧ್ಯಾಹ್ನ ಎಟಿಎಂ ಕೇಂದ್ರಕ್ಕೆ ಹೋದಾಗ ಹಣ ಕಳವು ಆಗಿರುವ ವಿಷಯ ಬಯಲಾಗಿದೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)