ಗುರುವಾರ , ಆಗಸ್ಟ್ 18, 2022
25 °C

ಆಟೊ ಕದಿಯುತ್ತಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಆಟೊ ಕಳ್ಳತನ ಮಾಡುತ್ತಿದ್ದ ಆರೋಪಿ ಶೇಖ್ ವಾಸೀಂ ಅವರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಸಿದ್ದಾಪುರ ನಿವಾಸಿ ವಾಸೀಂ, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಈತನಿಂದ ₹ 16 ಲಕ್ಷ ಮೌಲ್ಯದ 8 ಆಟೊ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಆಟೊಗಳನ್ನು ಆರೋಪಿ ಕದಿಯುತ್ತಿದ್ದ. ತನ್ನದೇ ಆಟೊ ವೆಂದು ಹೇಳಿ ಮಧ್ಯವರ್ತಿಗಳ ಮೂಲಕ ಮಾರುತ್ತಿದ್ದ. ದಾಖಲೆ ಕೇಳಿದರೆ, ಕೆಲದಿನ ಬಿಟ್ಟು ಕೊಡುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದ. ‘ಆಟೊ ಮಾರಾಟ ದಿಂದ ಬಂದ ಹಣವನ್ನು ಮದ್ಯ, ದುಶ್ಚಟಗ
ಳಿಗಾಗಿ ಖರ್ಚು ಮಾಡುತ್ತಿದ್ದ. ಕಲಾಸಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲೂ ಆಟೊ ಕದ್ದಿದ್ದ. ಅದರ ಮಾಲೀಕರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡು ಆರೋಪಿ ಯನ್ನು ಬಂಧಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು