ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bangalore Lit fest | ಸಂಭ್ರಮದ ಮಕ್ಕಳ ಸಾಹಿತ್ಯೋತ್ಸವ

Last Updated 4 ಡಿಸೆಂಬರ್ 2022, 1:29 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಲು ಬೆಂಗಳೂರು ಸಾಹಿತ್ಯೋತ್ಸವ ವೇದಿಕೆಯಾಯಿತು.

ಈ ಉತ್ಸವದಲ್ಲಿ ಮಕ್ಕಳ ಸಾಹಿತ್ಯ ಹಾಗೂ ಮೋಜು ಎಂಬ ಮಾಲ್ಗುಡಿ ಮತ್ತು ಸಿಯೋನಿ ಎಂಬ ವೇದಿಕೆ ನಿರ್ಮಿಸಲಾಗಿತ್ತು. ಸಿಯೋನಿ ವೇದಿಕೆಯಲ್ಲಿ ಮಕ್ಕಳ ವಿವಿಧ ಚಟವಟಿಕೆಗೆ ಅವಕಾಶ ಕಲ್ಪಿಸಿದರೇ, ಮಾಲ್ಗುಡಿ ವೇದಿಕೆಯಲ್ಲಿ ಸಾಹಿತ್ಯಕ್ಕೆ ಮೀಸಲಿಡಲಾಗಿತ್ತು.

ಲಲಿತ್‌ ಅಶೋಕ್‌ ಹೋಟೆಲ್‌ನ ಮನೋಹರ ಉದ್ಯಾನವು ನೂರಾರು ಉತ್ಸಾಹಿ ಮಕ್ಕಳಿಂದ ತುಂಬಿತ್ತು. ಸಿಯೋನಿ ವೇದಿಕೆಯಲ್ಲಿ ನಾಲ್ಕು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಸಂವಾದಾತ್ಮಕ ಆಟದ ಚಟವಟಿಕೆಗಳನ್ನು ಆಯೋಜಿಸಲಾಗಿತ್ತು. ಮಾಲ್ಗುಡಿ ವೇದಿಕೆಯಲ್ಲಿ ಮಕ್ಕಳ ನೆಚ್ಚಿನ ಪುಸ್ತಕದ ಲೇಖಕರನ್ನು ಭೇಟಿ ಮಾಡುವ ಮತ್ತು ಅವರೊಂದಿಗೆ ಸಂವಾದ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ ಸಂಗೀತ, ನಾಟಕ ಚಟವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಲು ಇದೊಂದು ಉತ್ತಮ ವೇದಿಕೆಯಾಗಿದೆ. ನನ್ನ ಇಬ್ಬರೂ ಮಕ್ಕಳು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ ಎಂದು ಪೋಷಕಿ ವಿದ್ಯಾ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಾಹಿತ್ಯೋತ್ಸದಲ್ಲಿ ಆಂಗ್ಲ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಇದರ ಜೊತೆಗೆ ಕನ್ನಡ ಸಾಹಿತ್ಯವನ್ನೂ ಮಕ್ಕಳಿಗೆ ಪರಿಚಯಿಸಬೇಕು ಎಂದು ಪೋಷಕ ನಾರಾಯಣ್‌ ಸಲಹೆ ನೀಡಿದರು.

ಮಕ್ಕಳನ್ನು ಸಾಹಿತ್ಯದ ಜಗತ್ತಿಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಮಕ್ಕಳಿಗೆ ಯಾವ ರೀತಿಯ ಚಟವಟಿಕೆ ನಡೆಸಲೂ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಮತ್ತೆ ಮಕ್ಕಳ ಕಲರವ ಎಲ್ಲರ ಕಣ್ಮನ ಸೆಳೆಯುತ್ತಿದೆ ಎಂದು ಕಾರ್ಯಕ್ರಮದ ಆಯೋಜಕ ವಿಕ್ರಮ್ ಶ್ರೀಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT