ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ‘ಬೆಂಗಳೂರು ಸಾಹಿತ್ಯ ಉತ್ಸವ’

Last Updated 2 ಡಿಸೆಂಬರ್ 2022, 20:43 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರುಸಾಹಿತ್ಯ ಉತ್ಸವದ 11ನೇ ಆವೃತ್ತಿ ಡಿ.3 ಮತ್ತು 4ರಂದು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯಲಿದೆ.

ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಕ್ರೀಡೆ ಹಾಗೂ ಕೋವಿಡ್‌ ಸಂದರ್ಭದಲ್ಲಿ ಎದುರಿಸಿದ ಸಂಕಷ್ಟಗಳು ಸೇರಿ ದಂತೆ ವೈವಿಧ್ಯಮಯ ವಿಷಯಗಳ ಬಗ್ಗೆಎರಡು ದಿನಗಳ ಉತ್ಸವದಲ್ಲಿ ಗೋಷ್ಠಿಗಳು ನಡೆಯಲಿವೆ.

ಐದು ವೇದಿಕೆಗಳಲ್ಲಿಬೆಳಿಗ್ಗೆ 10ರಿಂದ ನಡೆಯುವ ಗೋಷ್ಠಿ ಯಲ್ಲಿವಿವಿಧ ಕ್ಷೇತ್ರಗಳ ದೇಶ–ವಿದೇಶಗಳಚಿಂತಕರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.‘ಬಹುಭಾಷಿಕ ಜಗತ್ತು’ ಉತ್ಸವದಲ್ಲಿ ಗಮನಸೆಳೆಯಲಿದೆ.

ಮಕ್ಕಳಿಗೂ ಪ್ರತ್ಯೇಕ ವೇದಿಕೆ ರೂಪಿಸಲಾಗಿದೆ. ಅಮರ ಚಿತ್ರಕಥಾ ರಸಪ್ರಶ್ನೆ, ಮನರಂಜನೆಯ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ರೂಪಿಸಲಾಗಿದೆ. ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಸಹ ಆಯೋಜಿಸಲಾಗಿದೆ.

ಉತ್ಸವದಲ್ಲಿ ಅರ್ಥಪೂರ್ಣ ಸಂವಾದ, ಆರೋಗ್ಯಕರ ಚರ್ಚೆಗಳು ನಡೆಯಲಿವೆ. ಉತ್ಸವಕ್ಕೆ ಪ್ರವೇಶ ಉಚಿತವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ

http://bangalore literaturefestival.org ವೆಬ್‌ಸೈಟ್‌ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT