ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಬುಧವಾರ, ಏಪ್ರಿಲ್ 24, 2019
23 °C

ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

Published:
Updated:

ಬೆಂಗಳೂರು: ಬಿಸಿಲು, ಧಗೆಯಿಂದ ಕಂಗೆಟ್ಟಿದ್ದ ರಾಜಧಾನಿಯ ಜನರಿಗೆ ಬುಧವಾರ ಸಂಜೆ  ಸುರಿದ ಮಳೆ ತಂಪೆರೆದಿದೆ. 

ಮಧ್ಯಾಹ್ನ ಮೋಡ ಕವಿದ ವಾತಾವರಣ ಉಂಟಾಗಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆ ಸುರಿಯಿತು. 

ಗಾಂಧಿನಗರ, ಎಂ.ಜಿ ರಸ್ತೆ, ವಸಂತ ನಗರ, ರಾಜಾಜಿನಗರ, ಇಂದಿರಾನಗರ, ಬಾಣಸವಾಡಿ, ಕೆ.ಆರ್.ಪುರ, ಕಮ್ಮನಹಳ್ಳಿ, ಹಲಸೂರು, ಮೆಜೆಸ್ಟಿಕ್‌  ಸೇರಿದಂತೆ ಹಲವೆಡೆ ಮಳೆ ಸುರಿಯಿತು.

ಕಮ್ಮನಹಳ್ಳಿ ಮತ್ತು ಬಾಣಸವಾಡಿ ಭಾಗದಲ್ಲಿ ಆಲಿಕಲ್ಲು ಮಳೆ ಸುರಿದಿದೆ. 

ವ್ಯಾಪಕ ಮಳೆಗೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಬಾಣಸವಾಡಿಯ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಮುಳುಗಡೆಯಾಗಿವೆ. ಇದರಿಂದ ವಾಹನ ಸವಾರರು ‍ಪರದಾಡಿದರು.

ಗುರುವಾರವೂ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ವ್ಯಕ್ತಿ ಸಾವು: ಬಾರೀ ಬಿರುಗಾಳಿಗೆ ಲುಂಬಿಣಿ ಗಾರ್ಡನ್‌ ಬಳಿ ಬೈಕ್ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !