ಬೆಂಗಳೂರು ದಕ್ಷಿಣ: ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ನಾಮಪತ್ರ ಸಲ್ಲಿಕೆ

ಸೋಮವಾರ, ಏಪ್ರಿಲ್ 22, 2019
29 °C

ಬೆಂಗಳೂರು ದಕ್ಷಿಣ: ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರು ನಾಮಪತ್ರ ಸಲ್ಲಿಸಿದರು.

ಶಾಸಕರಾದ ಎಂ.ಕೃಷ್ಣಪ್ಪ, ರಾಮಲಿಂಗ ರೆಡ್ಡಿ, ಸೌಮ್ಯರೆಡ್ಡಿ, ಶರವಣ, ಮೇಯರ್ ಗಂಗಾಬಿಕೆ ಸಾಥ್ ನೀಡಿದ್ದರು.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಜಾಥಾದಲ್ಲಿ ಅವರು ಜಯನಗರದ ೨ನೇ ಬ್ಲಾಕ್ ನಲ್ಲಿರುವ ಚುನಾವಣಾ ಅಧಿಕಾರಿ ಕಚೇರಿಯವರೆಗೂ ಸಾವಿರಾರು ಕಾರ್ಯಕರ್ತರೊಂದಿಗೆ ಬಂದರು.

ಜಾಥಾದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಚಿನ್ಹೆಯ ಬಾವುಟಗಳು ರಾರಾಜಿಸುತ್ತಿದ್ದವು. ಡೊಳ್ಳುಗಳ ನಾದ, ವೀರಗಾಸೆಯ ಕುಣಿತ ದಾರಿಹೋಕರ ಗಮನ ಸೆಳೆದವು. ಪಟಾಕಿಗಳ ಸದ್ದಿನೊಂದಿಗೆ, ಕೈ ಪಕ್ಷಕ್ಕೆ ಜೈಕಾರಗಳು ಮೊಳಗಿದವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !