ಬಂಜಾರ ಬಡಾವಣೆಗೆ ಕಾವೇರಿ ನೀರಿನ ಪೂರೈಕೆ ಆರಂಭವಾಗಿದೆ. ಒಂದೆರಡು ಕಡೆಗಳಲ್ಲಿ ಕೊಳವೆಗಳ ಸಂಪರ್ಕ ತಪ್ಪಿರಬಹುದು. ಅಂಥದ್ದನ್ನು ಜಲಮಂಡಳಿ ಗಮನಕ್ಕೆ ತಂದರೆ ಒಂದೆರಡು ದಿನಗಳಲ್ಲೇ ಸರಿಪಡಿಸಲಾಗುತ್ತದೆ. ಸದ್ಯ ಈ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣವಾಗಬೇಕಿದೆ. ಹಂತ ಹಂತವಾಗಿ ಸರಿಪಡಿಸಲಾಗುತ್ತದೆ.