ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಆಫ್ ಬರೋಡಾ, ನಗರದಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ವಿಶಿಷ್ಟ ಪ್ರದರ್ಶನವನ್ನು ಏರ್ಪಡಿಸಿತ್ತು.

ಟ್ರಿನಿಟ್ ವೃತ್ತದ ಬಳಿ ಇರುವ ವಿಜಯ್ ಟವರ್ಸ್‌ನಲ್ಲಿ ಈ ವಿಶಿಷ್ಟ ಬಗೆಯ ರಿಯಲ್ ಎಸ್ಟೇಟ್ ಎಕ್ಸ್‌ಪೊ ಯಶಸ್ವಿಯಾಗಿ ನಡೆಯಿತು.

ತಮ್ಮಿಷ್ಟದ ಫ್ಲ್ಯಾಟ್, ಕಚೇರಿ ಕಟ್ಟಡ ಖರೀದಿಸಲು ಬಯಸುವವರಿಗೆ ವಿಶಿಷ್ಟ ಅವಕಾಶ ಒದಗಿಸಲಾಗಿತ್ತು. ಆಸಕ್ತ ಖರೀದಿದಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲೂ ಕ್ರಮ ಕೈಗೊಳ್ಳಲಾಗಿತ್ತು.

ಬೆಂಗಳೂರು ಮತ್ತು ಚೆನ್ನೈ ನಲ್ಲಿನ ಬೃಹತ್ ವಸತಿ ಮತ್ತು ಎಂಎಸ್‌ಎಂಇ ಘಟಕಗಳಲ್ಲಿ ಹಣ ಹೂಡಿಕೆ ಅವಕಾಶಗಳ ಬಗ್ಗೆಯೂ ಇಲ್ಲಿ ಹೂಡಿಕೆದಾರರಿಗೆ ಅಗತ್ಯ ಮಾಹಿತಿ ಒದಗಿಸಲಾಗಿತ್ತು. ಕಟ್ಟಡ ನಿರ್ಮಾಣಗಾರರು, ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿದ್ದರು. ಸಾಲದ ಅಗತ್ಯ ಇದ್ದವರಿಗಾಗಿ ವಿಶೇಷ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.