ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ 12 ವರ್ಷದ ಸಿಂಹಿಣಿ ಸನಾ ಹೃದಯ ಸಂಬಂಧಿ ಕಾಯಿಲೆಯಿಂದ ಶನಿವಾರ ಸಾವಿಗೀಡಾಗಿದೆ.
ಜೂನ್ 12ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಹಿಣಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಿಂಹಿಣಿ ಮೃತಪಟ್ಟಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಬಹು ಅಂಗಾಂಗಳ ವೈಫಲ್ಯದಿಂದ ಶನಿವಾರ ವನ್ಯ ಎಂಬ ಆರು ವರ್ಷದ ಹುಲಿ ಮೃತಪಟ್ಟ ಬೆನ್ನಲ್ಲೇ ಸನಾ ಸಾವು ಸಂಭವಿಸಿದೆ. ಸನಾ ಸಾವಿನೊಂದಿಗೆ ಉದ್ಯಾನದಲ್ಲಿಯ ಸಿಂಹಗಳ ಸಂಖ್ಯೆ 20ಕ್ಕೆ ಕುಸಿದಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಗಣೇಶ ಮತ್ತು ಹೇಮಾ ಜೋಡಿಗೆ 2010ರ ಏಪ್ರಿಲ್ 5ರಂದು ಸನಾ ಜನಿಸಿತ್ತು. ಸನಾ ಒಟ್ಟು 10 ಮರಿಗಳಿಗೆ ಜನ್ಮ ನೀಡುವ ಮೂಲಕ ಉದ್ಯಾನದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿತ್ತು. ಆ ಪೈಕಿ ಐದು ಸಿಂಹಗಳು ಬನ್ನೇರುಘಟ್ಟ ಸಿಂಹಗಳ ಸಫಾರಿಯಲ್ಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.