ಶುಕ್ರವಾರ, ಏಪ್ರಿಲ್ 10, 2020
19 °C

ರಾಜ್ಯ ಸ್ವಾಯತ್ತತೆಯ ಹೋರಾಟ: ಬರಗೂರು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿಜವಾದ ನಾಡು–ನುಡಿ ನಿಷ್ಠರು ನಾಡಗೀತೆ, ನಾಡಧ್ವಜಗಳಾಚೆಗೂ ಚಿಂತಿಸಿ ಕ್ರಿಯಾಶೀಲರಾಗಬೇಕು. ರಾಜ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಗಾಗಿ ಸಮಗ್ರ ಚಿಂತನೆಯ ಹೋರಾಟ ಕಟ್ಟಬೇಕು ಎಂದು ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಾಡ ಧ್ವಜ ಬೇಕು ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿರುವ ಅವರು, ನಾಯಕರ ಹೇಳಿಕೆಗಳು ಭಾವಸಂಬಂಧಿ ಸಂಕೇತಗಳಿಗೆ ಸೀಮಿತವಾಗಬಾರದು, ರಾಜ್ಯ ಸ್ವಾಯತ್ತತೆಯ ಸ್ವಯಂ ಆತ್ಮಹತ್ಯೆ ಮತ್ತು ಕೇಂದ್ರ ಸರ್ಕಾರದಿಂದಾಗುವ ಸ್ವಾಯತ್ತತೆಯ ಹತ್ಯೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಜಿಎಸ್‌ಟಿ, ನೀಟ್‌, ಹಿಂದಿ ಮೊದಲಾದ ಕ್ರಮಗಳ ಜತೆಗೆ ಕೇಂದ್ರ ಸರ್ಕಾರ ಆರ್‌ಟಿಐ ಮೊದಲಾದ ಕಾಯ್ದೆಗಳನ್ನು ಪರಿಷ್ಕರಿಸಿ ಕೆಲವು ಅಧಿಕಾರಗಳನ್ನು ಕೇಂದ್ರೀ ಕರಿಸಿಕೊಳ್ಳುತ್ತಿದೆ. ಇದರಿಂದ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು