ಬೆಂಗಳೂರು: ಯಲಹಂಕದ ಪುಟ್ಟೇನಹಳ್ಳಿ ಕೆರೆಯಲ್ಲಿ ಅಪರೂಪದ ವೆಸ್ಟರನ್ ರೀಫ್ ಹೆರಾನ್(ಕಡಲು ತೀರದ ಬಕ ಪಕ್ಷಿ) ಭಾನುವಾರ ‘ಪ್ರಕೃತಿ ನಡಿಗೆ’ಯಲ್ಲಿ ಕಂಡು ಬಂದಿದೆ.
ಪ್ರಜ್ವಲ್ ದೀಪ್ ಅವರ ನೇತೃತ್ವದಲ್ಲಿ ನಡೆದ ನಡಿಗೆ ಸಂದರ್ಭದಲ್ಲಿ ಕಂಡುಬಂದ ಈ ಪಕ್ಷಿಯನ್ನು ಕೆ. ಕಾರ್ತಿಕೇಯನ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಪಕ್ಷಿ ಹೊಸಕೋಟೆ ಕೆರೆಯಲ್ಲಿ 2020ರಲ್ಲಿ ಕಂಡುಬಂದಿತ್ತು.
ಪುಟ್ಟೇನಹಳ್ಳಿ ಕೆರೆಯಲ್ಲಿ 50 ಪ್ರಭೇದದ ಪಕ್ಷಿಗಳಿವೆ ಎಂದು ಪ್ರಜ್ವಲ್ ಮಾಹಿತಿ ನೀಡಿದರು. ಪುಟ್ಟೇನಹಳ್ಳಿ ಕರೆ ‘ಪಕ್ಷಿ ಸಂರಕ್ಷಣೆಗೆ ಮೀಸಲು’ ಕೆರೆಯಾಗಿದೆ. 2017ರಿಂದ ಇಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.