ಬಿಬಿಎಂಪಿ: ಬಸವನಗುಡಿ ಇ.ಇ. ಕಚೇರಿ ಸ್ಥಳಾಂತರ
ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿಯನ್ನು ಬನಶಂಕರಿ ಮೂರನೇ ಹಂತಕ್ಕೆ ಸ್ಥಳಾಂತರಿಸಲಾಗಿದೆ.
ತ್ಯಾಗರಾಜನಗರದ ಸಿ.ಟಿ.ಬೆಡ್‌ನ ಸಿ.ಕೆ.ಅಚ್ಚುಕಟ್ಟು ಮೈದಾನದ ಬಳಿಯ ಬಿಬಿಎಂಪಿ ಕಟ್ಟಡದಲ್ಲಿ ಬಸವನಗುಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಇತ್ತು. ಈ ಸ್ಥಳದಲ್ಲಿ ವಿವಿಧೋದ್ದೇಶ ಬಳಕೆಯ ಕಟ್ಟಡ ನಿರ್ಮಾಣವಾಗಲಿದೆ. ಹಾಗಾಗಿ ಈಗಿರುವ ಕಟ್ಟಡವನ್ನು ತೆರವುಗೊಳಿಸಬೇಕಿದೆ. ಹಾಗಾಗಿ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಧೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಕಚೇರಿಯ ಹೊಸ ವಿಳಾಸ: ಬನಶಂಕರಿ 3ನೇ ಹಂತ, ಶ್ರೀಕಂಠೇಶ್ವರ ಪಾರ್ಕ್, ವಿದ್ಯಾಪೀಠ ವಾರ್ಡ್, ಬೆಂಗಳೂರು ಒನ್ ಹತ್ತಿರ, ಬಿಬಿಎಂಪಿ ಕಟ್ಟಡ, ಚೆನ್ನಮ್ಮನಕೆರೆ ಅಚ್ಚುಕಟ್ಟು ಬೆಂಗಳೂರು-85.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.