ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ | ಅಕ್ಟೋಬರ್‌–ನವೆಂಬರ್‌ನಲ್ಲಿ ಚುನಾವಣೆ?

Last Updated 31 ಜುಲೈ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ರಾಜ್ಯ ಸರ್ಕಾರ ವಾರ್ಡ್‌ ಮೀಸಲಾತಿಯನ್ನು ಈ ವಾರದಲ್ಲಿ ಅಂತಿಮಗೊಳಿಸಿದರೆ ಅಕ್ಟೋಬರ್‌–ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಮತದಾರರ ಪಟ್ಟಿ ಅಂತಿಮವಾಗದ ಹೊರತು ಚುನಾವಣೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆ ಆಯೋಗ ಸಮಯ ವ್ಯರ್ಥ ಮಾಡದೆ ಚುನಾವಣೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮಗೊಂಡ ನಂತರ, ಚುನಾವಣೆ ಅಧಿಸೂಚನೆ ಹೊರಬೀಳಲಿದೆ.

ಪುನರ್‌ವಿಂಗಡಣೆಗೊಂಡ ವಾರ್ಡ್‌ ಮಟ್ಟದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸೋಮವಾರದಿಂದ ಆರಂಭವಾಗಲಿದೆ. ಮನೆಮನೆಗಳಿಗೆ ಭೇಟಿ ನೀಡುವ ಬಿಬಿಎಂಪಿ ಚುನಾವಣೆ ಸಿಬ್ಬಂದಿ ಮಾಹಿತಿ ಪಡೆಯಲಿದ್ದಾರೆ. ಮತದಾರರ ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ. ಸೆಪ್ಟೆಂಬರ್‌ 22ರಂದು ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಅಂತಿಮವಾಗಿ ಪ್ರಕಟಿಸಬೇಕು ಎಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಡಳಿತ ವಿಶೇಷ ಆಯುಕ್ತ, ದಕ್ಷಿಣ ಹಾಗೂ ಮಹದೇವಪುರ ವಲಯದ ಜಂಟಿ ಆಯುಕ್ತರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮತದಾರರು ಆಧಾರ್‌ ಸಂಖ್ಯೆ ಲಿಂಕ್‌ಮಾಡಿಕೊಳ್ಳುವ ಆಯ್ಕೆಯೂ ಇರುತ್ತದೆ. ಅರ್ಜಿ ಅಥವಾ ಚುನಾವಣಾ ಆಯೋಗದ ಆ್ಯಪ್‌ ಮೂಲಕ ಲಿಂಕ್ ಮಾಡಿ
ಕೊಳ್ಳಬಹುದು.

ವೇಳಾಪಟ್ಟಿ: ಆ.1ರಿಂದ 5ವರೆಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ.ಆ.6ರಿಂದ 11ರವರೆಗೆ ಕಾಣೆಯಾಗಿ
ರುವ, ಮರುಕಳಿಸಿರುವ ಹೆಸರುಗಳ ಪರಿಶೀಲನೆ. ಆ.12ರಿಂದ 14ರವರೆಗೆ ವಾರ್ಡ್‌ವಾರು ಮತದಾರರ ಪಟ್ಟಿಯ 1ನೇ ಚೆಕ್‌ಲಿಸ್ಟ್‌ ಸಿದ್ಧ. ನಂತರ ಎರಡು ದಿನ 1ನೇ ಪಟ್ಟಿಯ ಪರಿಶೀಲನೆ, ಮುದ್ರಣ ಪ್ರಕ್ರಿಯೆ. ಆ.25ರಂದು ವಾರ್ಡ್‌ವಾರು ಮತದಾರರ ಕರಡು ಪಟ್ಟಿ ಪ್ರಕಟ. ಸೆ.2ರವರೆಗೆ ಆಕ್ಷೇಪಣೆಗೆ ಅವಕಾಶ. ಸೆ.3ರಿಂದ 7ರವರೆಗೆ ಆಕ್ಷೇಪಣೆಗಳ ಪರಿಶೀಲನೆ. ಸೆ.8ರಿಂದ 11ರವರೆಗೆ ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮ ಚೆಕ್‌ಲಿಸ್ಟ್‌ ತಯಾರು. ಸೆ.12ರಿಂದ 15ರವರೆಗೆ ಅಂತಿಮ ಚೆಕ್‌ಲಿಸ್ಟ್‌ ಪರಿಶೀಲನೆ. ಸೆ.16ರಂದು ಮುದ್ರಣ ಆರಂಭ. ಸೆ.22ರಂದು ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮ ಪ್ರಕಟಣೆ.

ಒಂದೂವರೆ ತಿಂಗಳ ಪ್ರಕ್ರಿಯೆ

‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನಾವು ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ವಾರ್ಡ್‌ ಮೀಸಲಾತಿ ನಂತರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿದರೆ ವಿಳಂಬವಾಗುತ್ತದೆ ಎಂದು ಈಗಾಗಲೇ ಆ ಕಾರ್ಯವನ್ನು ಆರಂಭಿಸಿದ್ದೇವೆ. ಸೆ.22ರಂದು ಅಂತಿಮವಾಗಿ ಮತದಾರರ ಪಟ್ಟಿ ಪ್ರಕಟವಾಗಲಿದೆ. ಅದಾದ ಮೇಲೆ ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರದ ಒಂದೂವರೆ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿಯಲಿವೆ’ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT