ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

Last Updated 5 ಏಪ್ರಿಲ್ 2020, 20:50 IST
ಅಕ್ಷರ ಗಾತ್ರ

ಬೆಂಗಳೂರು: ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ಆಹಾರ ಹಾಗೂ ದಿನಸಿ ಸಾಮಗ್ರಿಗಳನ್ನೊಳಗೊಂಡ ಪೊಟ್ಟಣವನ್ನು ಬಿಬಿಎಂಪಿ ವಿತರಿಸುತ್ತಿದ್ದು, ಭಾನುವಾರ ಸಂಜೆ 6 ಗಂಟೆಯವರೆಗೆ 24,600 ಪೊಟ್ಟಣಗಳನ್ನು ಆಯಾ ವಲಯಗಳಿಗೆ ತಲುಪಿಸಿದೆ.

ಸಂಜೆ 6 ಗಂಟೆ ನಂತರ ಎರಡನೆಯ ಹಂತದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚು ಇರುವ ಮಹದೇವಪುರ ವಲಯಕ್ಕೆ 5 ಸಾವಿರ, ಪೂರ್ವ ವಲಯಕ್ಕೆ 1,200 ಹಾಗೂ ಯಲಹಂಕ ವಲಯಕ್ಕೆ 1 ಸಾವಿರ ಪೊಟ್ಟಣಗಳನ್ನು ತಲುಪಿಸಲಾಗಿದೆ.

ಆಹಾರ ಸಾಮಗ್ರಿ ಪೂರೈಸಲು ಬಿಬಿಎಂಪಿ ಒಟ್ಟು 58,532 ಕಾರ್ಮಿಕರ ಕುಟುಂಬಗಳನ್ನು ಗುರುತಿಸಿದೆ. ಭಾನುವಾರದವರೆಗೆ 31,400 ಕುಟುಂಬಗಳಿಗೆ ಆಹಾರ ಸಾಮಗ್ರಿ ಪೊಟ್ಟಣ ವಿತರಿಸಲಾಗಿದೆ. ಉಳಿದ 27,132 ಕುಟುಂಬಗಳಿಗೆ ಸೋಮವಾರ ವಿತರಿಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ‘ಆಹಾರ ವಿತರಣೆ ವೇಳೆ ಸುರಕ್ಷಿತ ಅಂತರ ಕಾಪಾಡುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಸೋಂಕು ಹರಡದಂತೆ ತಡೆಯುವ ಬಗ್ಗೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಮಹದೇವಪುರ ವಲಯ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT