ಬೆಂಗಳೂರು: ಬಸವನಗುಡಿ ಹಾಗೂ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಬಿಎಂಪಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಬಸವನಗುಡಿಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಆಸ್ಪತ್ರೆ ಕಟ್ಟಡ, ಬಸವನಗುಡಿ ವಾರ್ಡ್‌ನ ಅಶೋಕ ನಗರದಲ್ಲಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, ಹನುಮಂತನಗರ ವಾರ್ಡ್‌ನಲ್ಲಿ ಸಮುದಾಯ ಭವನ ಹಾಗೂ ದೋಭಿಘಾಟ್ ಒಳಗಿನ ಚಾವಣಿಯನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು.
ಕತ್ರಿಗುಪ್ಪೆಯಲ್ಲಿ 30 ಹಾಸಿಗೆಯ ಆಸ್ಪತ್ರೆ ಕಟ್ಟಡವನ್ನು ನವ ನಗರೋತ್ಥಾನ ಅನುದಾನದಲ್ಲಿ ₹3 ಕೋಟಿ ಹಾಗೂ ಬಿಬಿಎಂಪಿಯ ₹5.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ, ವಲಯ ಆಯುಕ್ತ ಜಯರಾಮ್ ರಾಯಪುರ ಇದ್ದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಯ್ಯ ರಸ್ತೆಯಲ್ಲಿ ರೆಫೆರಲ್ ಆಸ್ಪತ್ರೆಯನ್ನು ಶಾಸಕ ಉದಯ್ ಬಿ. ಗರುಡಾಚಾರ್
ಉದ್ಘಾಟಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.