ಸಚಿವರಿಗೆ ಶುಭಕೋರುವ ಫ್ಲೆಕ್ಸ್ ಪ್ರತ್ಯಕ್ಷ: ತೆರವುಗೊಳಿಸಿದ ಬಿಬಿಎಂಪಿ

7

ಸಚಿವರಿಗೆ ಶುಭಕೋರುವ ಫ್ಲೆಕ್ಸ್ ಪ್ರತ್ಯಕ್ಷ: ತೆರವುಗೊಳಿಸಿದ ಬಿಬಿಎಂಪಿ

Published:
Updated:
Deccan Herald

ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಕೆ ವಿರುದ್ಧ ಹೈಕೋರ್ಟ್‌ ಚಾಟಿ ಬೀಸಿದ ಬಳಿಕವೂ ನಗರದಲ್ಲಿ ಈ ಹಾವಳಿ ನಿಂತಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ಶುಭಕೋರುವ ಫ್ಲೆಕ್ಸ್‌ ಗಾಲ್ಫ್‌ ಕ್ಲಬ್‌ ಸಮೀಪದ ಸ್ಯಾಂಕಿ ರಸ್ತೆ ಬಳಿ ಭಾನುವಾರ ರಾರಾಜಿಸುತ್ತಿತ್ತು.

ಸೋಮವಾರ ಪರಮೇಶ್ವರ ಅವರು ಹುಟ್ಟಿದ ದಿನ. ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸಲುವಾಗಿ ಅಭಿಮಾನಿಗಳು ಈ ಫ್ಲೆಕ್ಸ್‌ ಹಾಕಿದ್ದರು. ಈ ಬಗ್ಗೆ ದೂರು ಬರುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳು ಇದನ್ನು ತೆರವುಗೊಳಿಸಿದರು.

‘ಸಚಿವರ ಅಭಿಮಾನಿಗಳು ಎರಡು ಕಡೆ ಫ್ಲೆಕ್ಸ್‌ ಅಳವಡಿಸಿದ್ದರು. ಇದರಲ್ಲಿ ಒಂದನ್ನು ಅಧಿಕೃತ ಪರವಾನಗಿ ಪಡೆದೇ ಅಳವಡಿಸಲಾಗಿತ್ತು. ನಾವು ಎರಡನ್ನೂ ತೆರವುಗೊಳಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ನನ್ನ ಸಹೋದರನ ಸಾವಿನ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ. ಹಾಗಾಗಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ’ ಎಂದು ಪರಮೇಶ್ವರ ಇತ್ತೀಚೆಗೆ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !