ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಪುನೀತ್‌ ರಾಜಕುಮಾರ್ ಪ್ರಶಸ್ತಿ ಪ್ರದಾನ

Published 18 ನವೆಂಬರ್ 2023, 20:05 IST
Last Updated 18 ನವೆಂಬರ್ 2023, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಮಣ್ಣಾಗಿ ಹೋಗುವ ಈ ನಾಡಿನ ಮಣ್ಣಿಗೆ ಗೌರವ ಕೊಡಬೇಕು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ  ಪುನೀತ್ ರಾಜಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಧನೆ ಮಾಡುವುದು ಬಹಳ ಕಷ್ಟ, ವಿವೇಕ, ವಿನಯತೆ ಬೆಳಸಿಕೊಂಡಾಗ ಇತಿಹಾಸ ಸೃಷ್ಟಿಸಲು ಸಾಧ್ಯ. ಜಗತ್ತಿನ ಎಲ್ಲ ಕಡೆಗಳಲ್ಲಿ ಗೌರವ ಸಿಗುವಂಥ ಸಾಧನೆಯನ್ನು ಕನ್ನಡಿಗರು ಮಾಡಿರುವುದು ನಮ್ಮ ಹೆಮ್ಮೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ನಿತ್ಯ ನಾವು ಸಂಚರಿಸುವ ರಸ್ತೆ, ನಡೆದಾಡುವ ಉದ್ಯಾನ, ನಡೆಸುವ ಜೀವನ ಉತ್ತಮವಾಗಿರಲು ಬಿಬಿಎಂಪಿಯ ಸಹಕಾರ ಕಾರಣ’ ಎಂದು ಶ್ಲಾಘಿಸಿದರು.

ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರಿಂದ ಸಂಗೀತ ಸಂಜೆ, ಎಂ.ಎಸ್. ಮೂಸಿಕಲ್ಸ್ ಇವೆಂಟ್ಸ್ ಮತ್ತು ಶಿವಂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನೇಪಾಳದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು.

ನಟಿ ಭವ್ಯಾ, ಮಾಜಿ ಮೇಯರ್‌ ಜೆ. ಹುಚ್ಚಪ್ಪ, ವಿಶೇಷ ಆಯುಕ್ತರಾದ ಕೆ.ವಿ. ತ್ರಿಲೋಕ್ ಚಂದ್ರ, ಮೌನೀಶ್ ಮೌದ್ಗೀಲ್, ಹರೀಶ್ ಕೆ., ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ಜಂಟಿ ಆಯುಕ್ತರಾದ ಪಲ್ಲವಿ ಕೆ.ಆರ್., ಪಾಲಿಕೆ ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT