ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಕ್ಷೇಮಾಭಿವೃದ್ಧಿ ಸಂಘಗಳಿಗೆ ಮಾರ್ಗಸೂಚಿ

Last Updated 14 ಆಗಸ್ಟ್ 2021, 16:08 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಛಯಗಳಲ್ಲಿನ ನಿರ್ವಹಣಾ ಸಮಿತಿಗಳಿಗೆ ಕೋವಿಡ್‌ಗೆ ಸಂಬಂಧಿಸಿದಂತೆ ಬಿಬಿಎಂಪಿಯು ಮಾರ್ಗಸೂಚಿಗಳನ್ನು ಹೊರಡಿಸಿದೆ.

ನಗರದಲ್ಲಿ ಕಳೆದ ಎರಡು ವಾರಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಒಟ್ಟಿಗೇ ಕಂಡುಬಂದರೆ ಅದನ್ನು ಕ್ಲಸ್ಟರ್ ಎಂದು ಗುರುತಿಸಲಾಗುತ್ತಿದೆ. ಜೊತೆಗೆ 100 ಮೀಟರ್ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗುತ್ತದೆ.

ಸಕ್ರಿಯ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಶುಕ್ರವಾರ 160 ದಾಟಿತ್ತು. ಅದರಲ್ಲಿ ಸುಮಾರು ಶೇ.50 ರಷ್ಟು ಅಂದರೆ 79 ಅಪಾರ್ಟ್‌ಮೆಂಟ್‌ ಸಮುಚ್ಛಯಗಳು ಕಂಟೈನ್ಮೆಂಟ್ ವಲಯಗಳಿವೆ. ಇವುಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಮಾರ್ಗಸೂಚಿಗಳು

* ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ಭೇಟಿ ನೀಡುವವರ ದೇಹದ ಉಷ್ಣಾಂಶವನ್ನು ಪರೀಕ್ಷಿಸಬೇಕು

* ಬೇರೆಯವರು ಅಪಾರ್ಟ್‌ಮೆಂಟ್‌ಗಳಿಗೆ ಬಂದರೆ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ದಾಖಲಿಸಿಕೊಳ್ಳಬೇಕು

* ನಿವಾಸಿಗಳ ಮತ್ತು ಭೇಟಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸ್ ಮಾಡುತ್ತಿರಬೇಕು

*ಹೊರ ರಾಜ್ಯಗಳಿಗೆ ಭೇಟಿ ನೀಡಿದವರು 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ ನೆಗೆಟಿವ್ ಫಲಿತಾಂಶವಿರುವ ವರದಿ ತಂದಿರಬೇಕು ಇಲ್ಲವಾದಲ್ಲಿ ಬಂದ ಮೇಲೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಅದರ ಫಲಿತಾಂಶ ಬರುವವರೆಗೆ ಕ್ವಾರಂಟೈನ್ ಆಗಬೇಕು

*ಈಜುಕೊಳವನ್ನು ಮುಚ್ಚಿರಬೇಕು. ಜಿಮ್‌ಗಳು ಶೇ 60ರಷ್ಟು ಜನರೊಂದಿಗೆ ಕಾರ್ಯನಿರ್ವಹಿಸಬಹುದು.

* 3 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳು ಮಾಸ್ಕ್ ಧರಿಸಿರುವಂತೆ ಪೋಷಕರು ನೋಡಿಕೊಳ್ಳಬೇಕು. ಜನ ಸೇರುವ, ಗುಂಪಾಗಿ ನಡೆಸುವ, ಸಾರ್ವಜನಿಕ ಅಥವಾ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ.

*ಹೋಂ ಡೆಲಿವರಿ, ಕೊರಿಯರ್ ಇನ್ನಿತರ ಸೇವೆಗಳಿಗೆ, ಸೇವೆ ನೀಡುವವರು ಅಪಾರ್ಟ್ಮೆಂಟ್‌ನ ಹೊರಗಿನ ಗೇಟ್ ಅಥವಾ ಮುಖ್ಯ ಗೇಟ್ ವರೆಗೆ ಮಾತ್ರ ಬರುವಂತೆ ನೋಡಿಕೊಳ್ಳಬೇಕು

*ಕಂಟೈನ್ಮೆಂಟ್ ವಲಯಗಳಿಂದ ಕಸ ಇತ್ಯಾದಿ ನಿರ್ವಹಣೆಗೆ ವೃತ್ತಿಪರ ಕೆಲಸಗಾರರನ್ನು ಬಳಸಬೇಕು

*ಕೋವಿಡ್‌ ಪಾಸಿಟಿವ್ ಪತ್ತೆಯಾದಲ್ಲಿ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿನ ಎಲ್ಲರೂ ಅವರಿಗೆ ಸಹಕರಿಸಬೇಕು

* ಅವರು ಮನೆಯಲ್ಲಿದ್ದುಕೊಂಡು ಆರೈಕೆ ಪಡೆಯಲು ಅವಕಾಶ ಇಲ್ಲದಿದ್ದಲ್ಲಿ,ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾಗಬೇಕು ಎಂದು ಬಿಬಿಎಂಪಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT