ಮಂಗಳವಾರ, ಮೇ 18, 2021
28 °C

ಬಿಡಿಎ ನಿವೇಶನ ವೀಕ್ಷಣೆ ಈಗ ಸುಲಭ: ಇ-ಹರಾಜು ಮಾಡುವ ನಿವೇಶನಗಳಿಗೆ ಇ-ಮ್ಯಾಪಿಂಗ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಇ-ಹರಾಜಿನಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಈ ನಿವೇಶನಗಳನ್ನು ಆನ್ಲೈನ್ ನಲ್ಲಿ  ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಈ ಸಲುವಾಗಿ ಪ್ರಾಧಿಕಾರವು ಇ-ಮ್ಯಾಪಿಂಗ್ ತಂತ್ರಜ್ಞಾನ ಬಳಸಿಕೊಂಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2ನೇ ಹಂತದಲ್ಲಿ ಒಟ್ಟು 308 ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕರು ನಿವೇಶನ ವೀಕ್ಷಣೆಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಬಿಡಿಎ ಆಯುಕ್ತರು ಹರಾಜಿಗೆ ಸಂಬಂಧಪಟ್ಟಂತೆ ಇ-ಮ್ಯಾಪಿಂಗ್ ಅನ್ನು ಅಳವಡಿಸುವಂತೆ ಆದೇಶಿಸಿದ್ದರು.

ಸಾಫ್ಟ್‌ವೇರ್ ಸಂಸ್ಥೆಯೊಂದರ ಸಹಾಯದೊಂದಿಗೆ ಇದೇ ಮೊದಲ ಬಾರಿಗೆ ಇ-ಹರಾಜಿಗೆ ಹಾಕಲ್ಪಟ್ಟಿರುವ ಎಲ್ಲಾ 308 ನಿವೇಶನಗಳಿಗೆ ಇ-ಮ್ಯಾಪಿಂಗ್ ಅನ್ನು ಅಳವಡಿಸಿ, ಬಿಡಿಎ ವೆಬ್‌ಸೈಟ್‌ನಲ್ಲಿ(bdabengaluru.org) ಪ್ರಕಟಿಸಲಾಗಿದೆ. ಪ್ರಾಧಿಕಾರದ ವೆಬ್‌ಸೈಟ್‌ನ ಹರಾಜು ಕೊಂಡಿಯಲ್ಲಿ ಅಳವಡಿಸಿರುವ ಇ-ಹರಾಜು ನಿವೇಶನಗಳ ಜಿಯೋಟ್ಯಾಗ್ ಮಾಡಿದ ನಕ್ಷೆಯ ಮೇಲೆ ಸಾರ್ವಜನಿಕರು ತಾವು ಖರೀದಿಸಲು ಇಚ್ಛಿಸಿರುವ ನಿವೇಶನ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿದರೆ, ಗೂಗಲ್ ಮ್ಯಾಪ್ ಮುಖಾಂತರ ಕುಳಿತಲ್ಲಿಯೇ ನೇರವಾಗಿ ನಿವೇಶನಗಳನ್ನು ವೀಕ್ಷಿಸಬಹುದು.
 
ಈ ವೇಳೆ ಬಡಾವಣೆಯ ಹೆಸರುಗಳನ್ನೊಳಗೊಂಡಂತೆ ನಿವೇಶನದ ಖಚಿತ ಅಳತೆ ಹಾಗೂ ನಿವೇಶನದ ಪರಿಸರವು ಸಹ ನಾಗರಿಕರಿಗೆ ಲಭಿಸಲಿದೆ.

ಈ ತಂತ್ರಜ್ಞಾನವನ್ನು ಬಿಡಿಎ ಅಳವಡಿಸಿಕೊಂಡಿರುವುದರಿಂದ ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ನಾಗರಿಕರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಶಾಶ್ವತವಾಗಿ ಬಿಡಿಎ ಅಳವಡಿಸಿಕೊಳ್ಳಲಿದೆ ಎಂದು ಆಯುಕ್ತ ಎಚ್.ಆರ್.ಮಹಾದೇವ್  ತಿಳಿಸಿರುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು