ಶುಕ್ರವಾರ, ಮೇ 20, 2022
27 °C

ಬೆರೆಟ್ಟಾ ಜೊತೆ ಬಿಇಎಲ್ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಆತ್ಮನಿರ್ಭರ’ ಕಲ್ಪನೆಯಡಿ ದೇಶೀಯವಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) ಕಂಪನಿಯು ಇಟಲಿಯ ಯುದ್ಧೋಪಕರಣ ಉತ್ಪಾದಕ ಕಂಪನಿ  ಬೆರೆಟ್ಟಾ ಇಟಲಿ ಜೊತೆಗೆ ಒಪ್ಪಂದ ಮಾಡಿಕೊಂಡಿತು.

ಬಂದೂಕುಗಳ ಮಾದರಿ ಶಸ್ತ್ರಾಸ್ತ್ರ (ಕ್ಲೋಸ್ ಕ್ವಾರ್ಟರ್‌ ಕಾರ್ಬೈನ್‌ ವೆಪನ್‌) ಉತ್ಪಾದನೆಗೆ ಸಂಬಂಧಿಸಿದಂತೆ ಉಭಯ ಕಂಪನಿಗಳು ಈ ಒಪ್ಪಂದ ಮಾಡಿಕೊಂಡಿವೆ. ದೇಶೀಯವಾಗಿ ಇವುಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಬೆರೆಟ್ಟಾ ತಾಂತ್ರಿಕ ನೆರವು ನೀಡಲಿದೆ.

ಬಿಇಎಲ್‌ನ ನಿರ್ದೇಶಕರಾದ (ಮಾರುಕಟ್ಟೆ) ಆನಂದಿ ರಾಮಲಿಂಗಮ್ ಹಾಗೂ ಬೆರೆಟ್ಟಾದ ಪ್ರಧಾನ ವ್ಯವಸ್ಥಾಪಕ ಕಾರ್ಲೊ ಫರ್ಲಿಟೊ ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು