ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ದೌರ್ಜನ್ಯ: ಡೆಲಿವರಿ ಬಾಯ್ ಬಂಧನ

Published 21 ಮಾರ್ಚ್ 2024, 15:18 IST
Last Updated 21 ಮಾರ್ಚ್ 2024, 15:18 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಆಕಾಶ್ (27) ಎಂಬುವವರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಲಬುರಗಿ ಜಿಲ್ಲೆಯ ಆಕಾಶ್ ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ. ಕುಂದಲಹಳ್ಳಿಯಲ್ಲಿ ವಾಸವಿದ್ದ. ಆ್ಯಪ್‌ ಆಧರಿತ ಆಹಾರ ಪೂರೈಕೆ ಕಂಪನಿಯೊಂದರಲ್ಲಿ ಟೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸರು ಹೇಳಿದರು.

‘ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆ, ಮಾರ್ಚ್ 17ರಂದು ಆ್ಯಪ್ ಮೂಲಕ ಆಹಾರ ಕಾಯ್ದಿಸಿದ್ದರು. ಆಹಾರ ಪೊಟ್ಟಣ ತೆಗೆದುಕೊಂಡು ಆರೋಪಿ ಆಕಾಶ್ ಮನೆ ಬಾಗಿಲಿಗೆ ಬಂದಿದ್ದರು. ಮಹಿಳೆ ಸಹ ಪೊಟ್ಟಣ ಪಡೆಯಲು ಮುಂದಾಗಿದ್ದರು.’

‘ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ನಿಮ್ಮ ಮನೆಯ ಶೌಚಾಲಯ ಬಳಸಬಹುದೆ?’ ಎಂದು ಆಕಾಶ್ ಕೇಳಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ, ಮನೆಯೊಳಗೆ ಕರೆದಿದ್ದರು. ಶೌಚಾಲಯ ಬಳಸಿದ್ದ ಆರೋಪಿ, ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿದ್ದ. ಒಂಟಿಯಾಗಿದ್ದ ಮಹಿಳೆಯ ಕೈ ಹಿಡಿದು ಎಳೆದಾಡಿದ್ದ. ಅಂಗಾಂಗಗಳನ್ನು ಮುಟ್ಟಲು ಯತ್ನಿಸಿದ್ದ. ಮಹಿಳೆ ಕೂಗಾಡುತ್ತಿದ್ದಂತೆ ಸ್ಥಳದಿಂದ ಹೊರಟುಹೋಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಘಟನೆ ಬಗ್ಗೆ ಮಹಿಳೆ ದೂರು ನೀಡುತ್ತಿದ್ದಂತೆ, ತನಿಖೆ ಕೈಗೊಂಡು ಆರೋಪಿಯನ್ನು ಸೆರೆಹಿಡಿಯಲಾಗಿದೆ. ಈತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT