ಕೇಂದ್ರ ಪುರಸ್ಕೃತ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ–ನಲ್ಮ್) ಅಡಿ ಸ್ಥಳೀಯ ಸಂಸ್ಥೆಗಳು ನಿರಾಶ್ರಿತರ ನೋಂದಣಿ ಮಾಡಿಕೊಂಡು ಅವರಿಗೆ ಆಶ್ರಯ ಕಲ್ಪಿಸಬೇಕು. ನಿರಾಶ್ರಿತರ ಕೇಂದ್ರಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಪ್ರೋತ್ಸಾಹ ಹಾಗೂ ಅನುದಾನ ಹಂಚಿಕೆ ಕಡಿಮೆಯಾಗಿದೆ. ನಿರಾಶ್ರಿತರ ನೋಂದಣಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಅನುದಾನ ಹಂಚಿಕೆ ಕಡಿಮೆ ಇರುವ ಕಾರಣಕ್ಕೆ ನಿರಾಶ್ರಿತರು ರಸ್ತೆಬದಿಯಲ್ಲೇ ಆಶ್ರಯ ಪಡೆದುಕೊಳ್ಳುವ ಸ್ಥಿತಿಯಿದೆ ಎಂದು ಎನ್‌ಜಿಒ ಪ್ರತಿನಿಧಿಯೊಬ್ಬರು ಹೇಳಿದರು.