ಬೆಂಗಳೂರು: ಹಾಸನ ಸೇರಿ ರಾಜ್ಯದ ವಿವಿಧೆಡೆ ಹೃದಯಾಘಾತದಿಂದ ಯುವಜನರು ಹಾಗೂ ಮಧ್ಯ ವಯಸ್ಕರು ಮೃತಪಡುತ್ತಿರುವ ಬಗ್ಗೆ ವರದಿಯಾಗುತ್ತಿರುವ ಕಾರಣ, ನಗರದ ಜಯದೇವ ಹೃದ್ರೋಗ ಸಂಸ್ಥೆ ಸೇರಿ ವಿವಿಧ ಪ್ರಮುಖ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆಗೆ ಭೇಟಿ ನೀಡುವ ಹೊರ ರೋಗಿಗಳ ಸಂಖ್ಯೆ ಶೇ 20 ರಷ್ಟು ಹೆಚ್ಚಳವಾಗಿದೆ.

ಹೃದಯದ ಕಾಳಜಿಯಿಂದ ಆರೋಗ್ಯವಂತರು ಸಹ ಆಸ್ಪತ್ರೆಗೆ ಭೇಟಿ ನೀಡಿ, ಇಸಿಜಿ ಸೇರಿ ವಿವಿಧ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಜಯನಗರದಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯು 1,050 ಹಾಸಿಗೆಗಳನ್ನು ಒಳಗೊಂಡಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ. ಹೃದ್ರೋಗ ಚಿಕಿತ್ಸೆ ಹಾಗೂ ತಪಾಸಣೆ ಸಂಬಂಧ ಈ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ರೋಗಿಗಳು ಬರುತ್ತಿದ್ದು, ಹೊರ ರೋಗಿಗಳ ವಿಭಾಗದ ನೋಂದಣಿ (ಒಪಿಡಿ) ವಾರದಿಂದ ಶೇ 15ರಿಂದ ಶೇ 20ರವರೆಗೆ ಏರಿಕೆಯಾಗಿದೆ.

ಜಯದೇವ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸರಾಸರಿ 1,300ರಿಂದ 1,400 ಇರುತ್ತಿದ್ದ ಹೊರರೋಗಿಗಳ ಸಂಖ್ಯೆ, ಈಗ 1,700ರಿಂದ 1,800ಕ್ಕೆ ತಲುಪಿದೆ. ಯುವಜನರು ಹಾಗೂ ಮಧ್ಯ ವಯಸ್ಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇದೇ ರೀತಿ, ನಾರಾಯಣ ಹೃದಯಾಲಯ, ಫೋರ್ಟಿಸ್ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿಯೂ ಹೃದಯ ತಪಸಾಣೆಗೆ ಬರುವವರ ಸಂಖ್ಯೆ ಕೊಂಚ ಏರಿಕೆಯಾಗಿದೆ.

‘ಜೀವನಶೈಲಿ ಬದಲಾದ ಕಾರಣ ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಧೂಮಪಾನದಂತಹ ವ್ಯಸನದಿಂದಲೂ ಹೃದಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಯುವಜನರಲ್ಲಿಯೂ ಒತ್ತಡ ಹೆಚ್ಚಾಗುತ್ತಿದೆ. ಪರೀಕ್ಷೆ, ಉದ್ಯೋಗ ಸೇರಿ ವಿವಿಧ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿಯೂ ಹೃದಯಾಘಾತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದು ಹೃದ್ರೋಗ ತಜ್ಞರು ತಿಳಿಸಿದರು.

ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕೆಲವರು ಅನಗತ್ಯ ಭಯಕ್ಕೆ ಒಳಗಾಗಿ ಬರುತ್ತಿದ್ದಾರೆ. ಅಗತ್ಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ
ಡಾ.ಕೆ.ಎಸ್. ರವೀಂದ್ರನಾಥ್ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

ಹತ್ತು ದಿನಗಳಿಂದ ಹೃದಯ ಪರೀಕ್ಷೆಗೆ ಬರುವವರ ಸಂಖ್ಯೆ ಶೇ 20ರಷ್ಟು ಹೆಚ್ಚಳವಾಗಿದೆ. 30ರಿಂದ 50 ವರ್ಷದೊಳಗಿನವರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ
ಡಾ.ರಾಜ್ಪಾಲ್ ಸಿಂಗ್ ಆರ್.ಎಲ್. ಫೋರ್ಟಿಸ್ ಆಸ್ಪತ್ರೆ ಹೃದ್ರೋಗ ವಿಭಾಗದ ನಿರ್ದೇಶಕ

ಹೃದಯಾಘಾತವು ಜೀವನಶೈಲಿ ಆಧಾರಿತ ಕಾಯಿಲೆ. ಬದಲಾದ ಜೀವನಶೈಲಿಯಿಂದ ಹೃದಯಾಘಾತ ಪ್ರಕರಣ ಹೆಚ್ಚಾಗಿದೆ. ಯುವಜನರಲ್ಲೂ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ
ಡಾ.ಕೇಶವ ಆರ್. ಮಣಿಪಾಲ್ ಆಸ್ಪತ್ರೆ ಹೃದ್ರೋಗ ತಜ್ಞ

ತಜ್ಞರ ಪ್ರಕಾರ ಪ್ರಮುಖ ಕಾರಣಗಳು

l ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್

l ಬದಲಾದ ಜೀವನಶೈಲಿ, ಧೂಮಪಾನ, ತಂಬಾಕು ಉತ್ಪನ್ನ ಸೇವನೆ, ಮಾದಕ ವಸ್ತುಗಳ ಸೇವನೆಯ ವ್ಯಸನ

l ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆ ಇಲ್ಲದಿರುವುದು

l ಜಂಕ್ ಫುಡ್ ಸೇರಿ ಪಾಶ್ಚಾತ್ಯ ಆಹಾರ ಸೇವನೆ

l ಜಿಮ್ಗಳಲ್ಲಿ ಅಶಿಸ್ತಿನ ಕಸರತ್ತು, ಅವೈಜ್ಞಾನಿಕವಾಗಿ ಪ್ರೊಟೀನ್ ಸಪ್ಲಿಮೆಂಟ್ ಪಡೆಯುವಿಕೆ

l ಆನುವಂಶಿಕವಾಗಿ, ಕುಟುಂಬದ ಸದಸ್ಯರಿಗೆ ಹೃದಯಾಘಾತದ ಇತಿಹಾಸವಿದ್ದರೆ

l ಮಾನಸಿಕ ಒತ್ತಡ, ಹೆಚ್ಚುತ್ತಿರುವ ವಾಯುಮಾಲಿನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.