ಶಾಸ್ತ್ರೀಯ ನೃತ್ಯೋತ್ಸವ 26ರಿಂದ

ಬೆಂಗಳೂರು: ಶಾಂತಲಾ ಆರ್ಟ್ಸ್ ಟ್ರಸ್ಟ್ ಮತ್ತು ಸೂರ್ಯ ಪರ್ಫಾರ್ಮಿಂಗ್ ಆರ್ಟ್ಸ್ನಿಂದ ಇದೇ 26ರಿಂದ 28ರವರೆಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ ಜರುಗಲಿದೆ.

26ರಂದು ಸಂಜೆ 6ಕ್ಕೆ ಐಸಿಸಿಆರ್ ವಲಯ ನಿರ್ದೇಶಕ ಪ್ರದೀಪ್ ಕುಮಾರ್ ನೃತ್ಯೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಆದಿತ್ಯ ಸುಬ್ರಮಣ್ಯಂ, ಶ್ರೀಲಾ ಶ್ರೀನಿವಾಸ್, ಮೀರಾ ರತ್ನಗಿರಿ ಅವರು ಭರತನಾಟ್ಯ ಪ್ರಸ್ತುಪಡಿಸಲಿದ್ದಾರೆ. 27ರಂದು ಬೆಳಿಗ್ಗೆ 10ಕ್ಕೆ ಇಂದ್ರಾಣಿ ಪಾರ್ಥಸಾರಥಿ, ಸಹನಾ ಬಾಲಸುಬ್ರಮಣ್ಯ, ನಿಹಾರಿಕಾ ರಾಜೀವ್, ಶ್ರೀನಿಧಿ ಗಣೇಶ್ ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. 28ರಂದು ನಡೆಯುವ ಸಮಾರಂಭದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಸ್ವರ ಸಂಜೆ’ ಸಂಗೀತ ಕಛೇರಿ 27ಕ್ಕೆ

ಬೆಂಗಳೂರು: ಸಪ್ತಕ್ದಿಂದ ಡಿ. 27ರಂದು ಸಂಜೆ 5.30ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ‘ಸ್ವರ ಸಂಜೆ’ ಸಂಗೀತ ಕಛೇರಿ ನಡೆಯಲಿದೆ.

ಗಾಯಕಿ ಶ್ರೀಮತಿ ದೇವಿ ಅವರಿಗೆ ಸುಮಿತ್ ನಾಯಕ್ (ತಬಲಾ), ಮಧುಸೂದನ್ ಭಟ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಇದಲ್ಲದೆ ಗಾಯಕ ವಿನೋದ್ ದಿಗ್ರಾಜಕರ್ ಅವರಿಗೆ, ಶ್ರೀವತ್ಸ ಕೌಲಗಿ (ತಬಲಾ), ವಿಘ್ನೇಶ್ ಭಾಗವತ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬಾಯ್ಬಡ್ಕಿ’ ನಾಟಕ ಪ್ರದರ್ಶನ 27ಕ್ಕೆ

ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ ಡಿ. 27ಕ್ಕೆ ಸಂಜೆ 6.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನವಾಗಲಿದೆ. ಭೀಷ್ಮ ರಾಮಯ್ಯ ಅವರು ನಾಟಕದ ರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ. ನಾಟಕವನ್ನು ಕಲ್ಪವೃಕ್ಷ ಟ್ರಸ್ಟ್ ಪ್ರಸ್ತುತಪಡಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಟಕ ಸಂಭ್ರಮ 28ರಿಂದ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ, ಯಕ್ಷ ರಂಗಾಯಣ, ಗಾಂಧಿ ಪಾರ್ಕ್ ನಡಿಗೆದಾರರ ಕೂಟದಿಂದ ಇದೇ 28 ಹಾಗೂ 29ರಂದು ಭಾರತ್ನಗರದ ಮಹಾತ್ಮ ಗಾಂಧಿ ಉದ್ಯಾನದ ಕಸ್ತೂರಬಾ ಆಪ್ತ ರಂಗಮಂದಿರದಲ್ಲಿ ಬೆಂಗಳೂರು ಜಿಲ್ಲಾ ನಾಟಕ ಸಂಭ್ರಮ ಆಯೋಜಿಸಲಾಗಿದೆ.

28ರಂದು ಸಂಜೆ 7ಕ್ಕೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಬೆಂಗಳೂರು ಜಿಲ್ಲಾ ನಾಟಕ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ಮಹಾತ್ಮರ ಬರವಿಗಾಗಿ’ ನಾಟಕ ಪ್ರದರ್ಶನ ಇರಲಿದೆ. 29ರಂದು ಸಂಜೆ 7ಕ್ಕೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕ ಪ್ರದರ್ಶಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಛಾಯಾಚಿತ್ರಗಳ ಪ್ರದರ್ಶನ 29ರಿಂದ

ಬೆಂಗಳೂರು: ಕಡಲೆಕಾಯಿ ಪರಿಷೆಗೆ ಸಂಬಂಧಿಸಿದಂತೆ ಕೆ. ವೆಂಕಟೇಶ್ ಅವರು ತೆಗೆದಿರುವ ಛಾಯಾಚಿತ್ರಗಳ ಪ್ರದರ್ಶನವನ್ನು ಡಿ. 29 ರಿಂದ 31ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಮಾಣಿ ವೃತ್ತಾಂತಗಳು’ ಎಂಬ ಶೀರ್ಷಿಕೆ ಅಡಿ ಆಯೋಜಿಸಲಾಗಿದೆ.

ಮಾಹಿತಿಗೆ: 98440 25525.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.