ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ ಭಾರತದ ನಂಬರ್ 1 ಕ್ರೈಂ ಸಿಟಿ! Numbeo ವರದಿ ಬಿಡುಗಡೆ

Numbeo ಎಂಬ ಆನ್‌ಲೈನ್‌ ಡಾಟಾಬೇಸ್ ಸಂಸ್ಥೆ, ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಪ್ರಮುಖ ನಗರಗಳು ಯಾವುವು? ಎಂಬ ವರದಿಯನ್ನು ಬಿಡುಗಡೆ ಮಾಡಿದೆ.
Published 6 ಏಪ್ರಿಲ್ 2024, 3:22 IST
Last Updated 6 ಏಪ್ರಿಲ್ 2024, 3:22 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ: Numbeo ಎಂಬ ಆನ್‌ಲೈನ್‌ ಡಾಟಾಬೇಸ್ ಸಂಸ್ಥೆ, ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಪ್ರಮುಖ ನಗರಗಳು ಯಾವುವು? ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ ವೆನಿಜುವೆಲಾದ ಕ್ಯಾರ್‌ಕಸ್ ನಗರ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದಿದೆ.

ಇನ್ನೊಂದು ವಿಶೇಷವೆಂದರೆ ಟಾಪ್ 20ರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಐದು ನಗರಗಳು ಸ್ಥಾನ ಪಡೆದಿವೆ.

ಡರ್ಬಾನ್ ಮೂರನೇ ಸ್ಥಾನ, ಜೋಹಾನ್ಸ್‌ಬರ್ಗ್ ನಾಲ್ಕನೇ ಸ್ಥಾನ, ಪೋರ್ಟ್ ಎಲಿಜೆಬೆತ್ 8 ನೇ ಸ್ಥಾನ ಹಾಗೂ ಕೇಪ್‌ಟೌನ್ 18 ನೇ ಸ್ಥಾನ ಪಡೆದಿವೆ.

ದಕ್ಷಿಣ ಆಫ್ರಿಕಾದಲ್ಲಿ ಸಂಘಟಿತ ಅಪರಾಧಗಳು ಹೆಚ್ಚುತ್ತಿದ್ದು 2023ರಲ್ಲಿ 7,700 ಕೊಲೆಗಳು ನಡೆದಿವೆ ಎಂದು ವರದಿ ಹೇಳಿದೆ.

Numbeo ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ 200ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತದ ಹಲವು ನಗರಗಳೂ ಹೆಸರು ಪಡೆದಿವೆ.

ಜಾಗತಿಕವಾಗಿ ದೆಹಲಿ 70 ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಗರ ಎಂದು ಗುರುತಾಗಿದೆ. ನೋಯ್ಡಾ 87ನೇ ಸ್ಥಾನ, ಗುರುಗ್ರಾಮ 95ನೇ ಸ್ಥಾನ ಪಡೆದಿವೆ.

Numbeo ವರದಿ ಪ್ರಕಾರ ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರವಾಗಿ ಗುರುತಾಗಿದ್ದು ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ.

ಇಂದೋರ್ (136), ಕೋಲ್ಕತ್ತ (159), ಮುಂಬೈ (169), ಹೈದರಾಬಾದ್ (174), ಚಂಡೀಗರ್ (177), ಪುಣೆ (184) ನಗರಗಳೂ ಸಹ ಟಾಪ್ 200ರ ಪಟ್ಟಿಯಲ್ಲಿ ಬಂದಿವೆ.

Numbeo ಸರ್ಬಿಯಾ ಮೂಲದ ಆನ್‌ಲೈನ್ ಡಾಟಾಬೇಸ್ ಸಂಸ್ಥೆಯಾಗಿದ್ದು ವಾಸಯೋಗ್ಯ ಪ್ರಮುಖ ನಗರಗಳು, ದೇಶಗಳು, ಹೆಚ್ಚು ಅಪರಾಧ ನಡೆಯುವ ನಗರಗಳು ಎಂಬ ಜನಪಯೋಗಿ ಮಾಹಿತಿ ಸೇರಿದಂತೆ ಅನೇಕ ಬಗೆಯ ಸಂಶೋಧನಾತ್ಮಕ ವರದಿಗಳನ್ನು ಬಿಡುಗಡೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT