ಹೆಬ್ಬಾಳ–ಕೆಂಪಾಪುರ ನಡುವೆ ಮೆಟ್ರೊ ಪಿಲ್ಲರ್ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಮೆಟ್ರೊ ಕಾಮಗಾರಿಯಿಂದಾಗಿ ಅಗಲ ಕಡಿಮೆಗೊಂಡಿರುವ ನಾಗವಾರದ ಹೊರವರ್ತುಲ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವ ವಾಹನಗಳು.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ವೀರಣ್ಣಪಾಳ್ಯದ ಹೊರವರ್ತುಲ ರಸ್ತೆಯಲ್ಲಿ ವಾಹನದಟ್ಟಣೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬಾಬುಸಾಪಾಳ್ಯದ ಹೊರವರ್ತುಲ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳ ನಡುವೆ ಸಂಚರಿಸಲು ಪರದಾಡಿದ ಆಂಬುಲೆನ್ಸ್
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಹೊರ ವರ್ತುಲ ರಸ್ತೆಯಲ್ಲಿ ಜಾಗ ಇದ್ದಲ್ಲೆಲ್ಲ ನುಗ್ಗುತ್ತಿದ್ದ ವಾಹನಗಳು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ನಮ್ಮ ಮನೆಯವರು 15 ವರ್ಷಗಳಿಂದ ನಡೆಸುತ್ತಿದ್ದ ಹೋಟೆಲ್ ಸೇರಿದಂತೆ ಇಲ್ಲಿದ್ದ ಕೆಲವು ಅಂಗಡಿಗಳನ್ನೆಲ್ಲ ಮೆಟ್ರೊ ಕಾಮಗಾರಿಗಾಗಿ ತೆರವುಗೊಳಿಸಿದರು. ಕಾಮಗಾರಿ ನಡೆಯುತ್ತಲೇ ಇದೆ. ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ದೂಳು ತುಂಬಿ ಹೋಗಿದೆ. ಪಕ್ಕದಲ್ಲಿರುವ ಯಾವುದೇ ಅಂಗಡಿ ಹೋಟೆಲ್‌ಗಳಲ್ಲಿ ವ್ಯಾಪಾರವೇ ಇಲ್ಲದಂತಾಗಿದೆ.
ಶಕುಂತಲಾ ನಾಗವಾರ
ಪ್ರತಿ ತಿಂಗಳು ನಾಲ್ಕೈದು ಲಕ್ಷ ರೂಪಾಯಿ ನಷ್ಟ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ನಾವು ಯಾರನ್ನೂ ದೂರಲು ಹೋಗುವುದಿಲ್ಲ. ಕಾಮಗಾರಿಗಳು ನಡೆಯುತ್ತಿರುವಾಗ ಸಮಸ್ಯೆ ಆಗಿಯೇ ಆಗುತ್ತದೆ. ಆದಷ್ಟು ಬೇಗ ಮೆಟ್ರೊ ಕಾಮಗಾರಿ ಪೂರ್ಣಗೊಳಿಸಿದರೆ ಸಮಸ್ಯೆ ಪರಿಹಾರಗೊಳ್ಳಲಿದೆ.
ಬಸವರಾಜ್ ಹೋಟೆಲ್ ಮಾಲೀಕರು ವೀರಣ್ಣ ಪಾಳ್ಯ