ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ, ಕಂಬ, ಕಸದಲ್ಲೂ ಡ್ರಗ್ಸ್ !

Last Updated 10 ಡಿಸೆಂಬರ್ 2021, 21:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇತ್ತೀಚೆಗಷ್ಟೇ ಮಾದಕ ವಸ್ತು ಮಾರಾಟ ಜಾಲ ಭೇದಿಸಿದ್ದ ಸಿಸಿಬಿ ಪೊಲೀಸರು, ಐವರು ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

‘ಆಹಾರ ಪೊಟ್ಟಣಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರುತ್ತಿದ್ದ ಕೇರಳದ ಮೊಹಮ್ಮದ್ ಸಕಾರಿಯಾ, ಶ್ಯಾಮ್‌ ದಾಸ್‌ ಸೇರಿದಂತೆ ಐವರು ಆರೋಪಿಗಳನ್ನು ಇತ್ತೀಷೆಗಷ್ಟೇ ಬಂಧಿಸಲಾಗಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆನ್‌ಲೈನ್ ಜಾಲತಾಣ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಗ್ರಾಹಕರು ಡ್ರಗ್ಸ್ ಕಾಯ್ದಿರಿಸುತ್ತಿದ್ದರು. ಆರೋಪಿಗಳು, ಆಹಾರ ಹಾಗೂ ತಿಂಡಿ– ತಿನಿಸು ಪೊಟ್ಟಣಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.’

‘ಡ್ರಗ್ಸ್ ಪೊಟ್ಟಣಗಳನ್ನು ಮರ, ಕಂಬ, ಕಸದ ಡಬ್ಬಿಗಳ ಬಳಿ ಬಚ್ಚಿಟ್ಟು ಗ್ರಾಹಕರಿಗೆ ಹೇಳು
ತ್ತಿದ್ದರು. ಹಣ ಆನ್‌ಲೈನ್ ಮೂಲಕ ಪಾವತಿ ಮಾಡು
ತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT